ಬಂಟ್ವಾಳ: ಪಾಳು ಬಾವಿಗೆ ಬಿದ್ದ ನಾಯಿಯೊಂದನ್ನು ಬಂಟ್ವಾಳ ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಇಂದು ಬೆಳಗ್ಗೆ ಮೊಡಂಕಾಪಿನ ಗಾಂದೋಡಿ ಬಳಿ ನಡೆದಿದೆ.
ಸ್ಥಳೀಯರ ಮಾಹಿತಿ ಪ್ರಕಾರ ನಾಯಿಯು ಕಳೆದ ಮೂರು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದು, ಬಾವಿಯನ್ನು ಯಾರೂ ಉಪಯೋಗಿಸದ ಹಿನ್ನೆಲೆಯಲ್ಲಿ ನಾಯಿ ಬಿದ್ದಿರುವುದು ಗಮನಕ್ಕೆ ಬಂದಿರಲಿಲ್ಲ.
ಆದರೆ ಇಂದು ನಾಯಿ ಬಾವಿಯಲ್ಲಿರುವುದು ಗೊತ್ತಾಗಿದ್ದು, ಗಾಂದೋಡಿ ನಿವಾಸಿ ವಿಶ್ವನಾಥ ಶೆಟ್ಟಿ ಅವರು ಪೊಲೀಸ್ ೧೦೦ ಸಂಖ್ಯೆಗೆ ಕರೆ ಮಾಡಿದ್ದು, ಅವರು ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಅಗ್ನಿಶಾಮಕ ಸಿಬಂದಿಯೊಬ್ಬರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ನಾಯಿಗೆ ಹಗ್ಗವನ್ನು ಕಟ್ಟಿದ್ದಾರೆ. ಅವರು ಮೇಲೆ ಬಂದ ಬಳಿಕ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲಾಗಿದೆ.