Saturday, April 27, 2024

ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು : ಕುಟುಂಬಸ್ಥರು ಕಂಗಾಲು

ಉಪ್ಪಿನಂಗಡಿ: ಮದುವೆ ಮಂಟಪದಲ್ಲಿ ವರನಿಂದ ತಾಳಿ ಕಟ್ಟಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯಲ್ಲಿದ್ದ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.

ಕೊಣಾಲು ಗ್ರಾಮದ ಕೋಲ್ಪೆ ದಿ| ಬಾಬು ಗೌಡ ಅವರ ಪುತ್ರ ಉಮೇಶ ಅವರ ವಿವಾಹವು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ| ಕೊರಗಪ್ಪ ಗೌಡ ಅವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ. 26ರ ಬೆಳಗ್ಗೆ 11.35ರ ಮುಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು.

ಅದರಂತೆ ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು. ದಾರೆ ಸೀರೆ ಹಾಗೂ ಶೃಂಗಾರದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದ ವಧು ಸರಸ್ವತಿ ಹಾಗೂ ವರ ಉಮೇಶ ಪರಸ್ಪರ ಹೂಮಾಲೆ ಹಾಕಿಸಿಕೊಂಡಿದ್ದರು.

ಇನ್ನು ವರ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ನನಗೆ ಇಷ್ಟ ಇಲ್ಲ ಎಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ. ಇದರಿಂದ ಎರಡೂ ಕಡೆಯವರೂ ವಿಚಲಿತಗೊಂಡು ವಧುವಿನ ಮನವೊಲಿಕೆಗೆ ಮುಂದಾದರೂ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿರುವುದರಿಂದ ಬಳಿಕ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ತೆರಳಿದ್ದಾರೆ.

More from the blog

ಲೋಕಸಭಾ ಚುನಾವಣೆ, ಬಂಟ್ವಾಳದಲ್ಲಿ ಶೇ.79.9 ಮತದಾನ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂದಾಜು ಶೇ.79.9 ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ಶೇ.77.44 ರಷ್ಟು ಮತದಾನವಾಗಿದೆ. ಬಿಸಿಲನ್ನು ಲೆಕ್ಕಿಸದೆ, ಸೆಕೆಯ ನಡುವೆಯೂ ಮತದಾರರು ತನ್ನ ಜವಾಬ್ದಾರಿಯನ್ನು...

ಮಧ್ಯಾಹ್ನ 3 ಗಂಟೆಯವರೆಗೆ ದ.ಕ ಜಿಲ್ಲೆಯಲ್ಲಿ ನಡೆದ ಮತದಾನವೆಷ್ಟು…?

ಮಂಗಳೂರು: ಲೋಕಸಭಾ ಚುನಾವಣೆಗೆ ಬಿಸಿಲಿನ ಧಗೆಯ ನಡುವೆಯೂ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ 58.65% ಮತ ದಾನ ನಡೆದಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮತ ಬೆಳ್ತಂಗಡಿ 61.41 ಮೂಡುಬಿದರೆ 54.95 ಮಂಗಳೂರು ಉತ್ತರ 56.76 ಮಂಗಳೂರು ದಕ್ಷಿಣ 51.05 ಮಂಗಳೂರು ಉಳ್ಳಾಲ...

ತಂದೆ- ತಾಯಿಯೊಂದಿಗೆ ತೆರಳಿ ಮತ ಚಲಾಯಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಡೊಂಗರಿಕೇರಿ ವಾರ್ಡಿನ ಬೂತ್ ಸಂಖ್ಯೆ 117 ರಲ್ಲಿ ಅವರ ತಂದೆ ಮತ್ತು ತಾಯಿಯೊಂದಿಗೆ ತೆರಳಿ ಮತವನ್ನು ಚಲಾಯಿಸಿದರು.

ಮತಗಟ್ಟೆ ಬಂದು ಮತದಾನ ಮಾಡಿದ 85 ವರ್ಷದ ಅಜ್ಜಿ

ಕಲ್ಲಡ್ಕ ಮಾದರಿ ಸರಕಾರಿ ಶಾಲೆಯಲ್ಲಿ 85 ವರ್ಷದ ಅಜ್ಜಿಯೋರ್ವರು ಮತದಾನ ಮಾಡಿ ಗಮನ ಸೆಳೆದರು. ಕೆ.ಸಿ.ರೋಡ್ ನಿವಾಸಿ ಬಿ.ಪಾತಿಮ್ಮ ( 85) ಅವರು ಅನಾರೋಗ್ಯದಿಂದ ಬಳಲುತ್ತಿರುವ ಇವರಿಗೆ ಮಾತು ಬರುವುದಿಲ್ಲ, ನಿಂತುಕೊಳ್ಳುವ ಶಕ್ತಿಯಿಲ್ಲ, ಹಾಗಾಗಿ ಇವರನ್ನು...