Sunday, April 21, 2024

ಸುಬ್ರಹ್ಮಣ್ಯ : ವೇತನಕ್ಕೆ ನೀತಿ ಸಂಹಿತೆ ಅಡ್ಡಿ ಆಯಿತೇ!! ಮೇಲಧಿಕಾರಿಗಳಿಗೆ ನೌಕರರ ನೋವು ಯಾಕೆ ಅರ್ಥ ಆಗುತ್ತಿಲ್ಲ..!

ಸುಬ್ರಹ್ಮಣ್ಯ: ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ರಥ ನಿರ್ಮಾಣ ಮೊದಲಾದ ಪಂಚಪರ್ವದ ಕೆಲಸ ಕಾರ್ಯಗಳನ್ನು ಪಾರಂಪರಿಕವಾಗಿ ನಿರ್ವಹಿಸುತ್ತಿರುವ ಸುಮಾರು 27 ಮಂದಿ ಮಲೆಕುಡಿಯ ಜನಾಂಗದ ನೌಕರರಿಗೆ ಕಳೆದ ಎರಡು ತಿಂಗಳುಗಳಿಂದ ದೇವಸ್ಥಾನದ ಆಡಳಿತ ವೇತನ ವಾವತಿಸಿಲ್ಲ. ಕಳೆದ ಒಂದು ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಗುತ್ತಿಗೆದಾರ ಕಂಪೆನಿಯ ಮುಖಾಂತರ ವೇತನ ನೀಡಲಾಗುತ್ತಿತ್ತು. ಕಳೆದ ಮಾರ್ಚ್ ತಿಂಗಳಿಂದ ಗುತ್ತಿಗೆದಾರ ಕಂಪೆನಿಯ ಟೆಂಡರ್ ಅವಧಿ ಕೊನೆಗೊಂಡಿರುತ್ತದೆ. ಚುನಾವಣೆಯ ನೀತಿ ಸಂಹಿತೆಯ ನೆಪವೊಡ್ಡಿ ದೇವಸ್ಥಾನದ ಆಡಳಿತ ಹೊಸದಾಗಿ ಟೆಂಡರ್ ಕರೆದಿಲ್ಲ.

ಇದೀಗ ಪ್ರಸ್ತುತ ಇರುವ ಗುತ್ತಿಗೆದಾರ ಕಂಪೆನಿಯ ಮುಖಾಂತರವೇ ಚುನಾವಣೆಯ ನೀತಿಸಂಹಿತೆ ಕೊನೆಗೊಳ್ಳುವ ತನಕ ತಾತ್ಕಾಲಿಕವಾಗಿ ನೌಕರರನ್ನು ಮೂರು ತಿಂಗಳ ಅವಧಿಗೆ ಮುಂದುವರೆಸಿ ವೇತನ ಪಾವತಿಸಲು ಅನುಮತಿ ಕೋರಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆಯನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕಛೇರಿಯಿಂದ ಕಳುಹಿಸಿ ತಿಂಗಳಾದರೂ ಆದೇಶ ಬಾರದ ಕಾರಣ ಬಡ ನೌಕರರು ಕಂಗಾಲಾಗಿದ್ದಾರೆ. ಚುನಾವಣಾ ಕರ್ತವ್ಯದ ನೆಪವೊಡ್ಡಿ ಜಿಲ್ಲಾಧಿಕಾರಿಯವರು ತುರ್ತು ಅವಶ್ಯವಿರುವ ಕಡತಗಳನ್ನೂ ಸಹಿ ಮಾಡುತ್ತಿಲ್ಲ.

ಕುಟುಂಬದ ಜೀವನ ನಿರ್ವಹಣೆಗೆ ದೇವಸ್ಥಾನದ ವೇತನವನ್ನೇ ನಂಬಿಕೊಂಡಿರುವ ಬಡ ಮಲೆಕುಡಿಯ ನೌಕರರ ಪರಿಸ್ಥಿತಿ ಅತಂತ್ರವಾಗಿದೆ. ಕೆಲಸಗಳು ಮಾಮೂಲಿನಂತೆಯೇ ನಡೆಯಬೇಕಾಗಿರುವಾಗ ನಿಯಮ, ಕಾಯ್ದೆಗಳ ನೆಪವೊಡ್ಡಿ ನೌಕರರಿಗೆ ವೇತನ ನೀಡದೆ ಸತಾಯಿಸುವುದು ಖಂಡನೀಯ, ತಕ್ಷಣ ನೌಕರರಿಗೆ ಕಳೆದ ಮೂರು ತಿಂಗಳುಗಳಿಂದ ಬಾಕಿ ಇರಿಸಿಕೊಂಡಿರುವ ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಯ ಸದಸ್ಯ ಹರೀಶ ಇಂಜಾಡಿಯವರು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಪುತ್ತೂರು ಸಹಾಯಕ ಆಯುಕ್ತರನ್ನು ಆಗ್ರಹಿಸಿದ್ದಾರೆ.

More from the blog

ಕಾಂಗ್ರೇಸ್ ಸರಕಾರದ ಆಡಳಿತದಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಒಟ್ಟು 28 ಸ್ಥಾನದಲ್ಲಿದಲ್ಲಿ ಗೆಲುವು ಸಾಧಿಸುವುದು ನಿಶ್ವಿತ,ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಅವರು ಬಿಸಿರೋಡಿನ ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು...

ಟ್ಯಾಂಕರ್ ಹರಿದು ಪಾದಚಾರಿ ಸ್ಥಳದಲ್ಲೇ ಸಾವು

ಮಂಗಳೂರು: ಟ್ಯಾಂಕರ್ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಕಾರ್ಮಿಕ ಗುಡ್ಡು ಯಾದವ್ ಎನ್ನಲಾಗಿದೆ ಯಾದವ್ ರಸ್ತೆ ಬದಿ‌ ನಡೆದುಕೊಂಡು...

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರ ಹಿತ ಹಾಗೂ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಎ.19 ಮತ್ತು 20ರಂದು ಕಟೀಲು ಪರಿಸರದಲ್ಲಿ ವಾಹನ ಸಂಚಾರದಲ್ಲಿ...

ಜಿಲ್ಲೆಯಲ್ಲಿ ಜೆ.ಡಿ.ಎಸ್.ಪಕ್ಷ ನಿಷ್ಕ್ರಿಯವಾಗಲು ಕಾರಣರಾದ ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡರು ರಾಜೀನಾಮೆ ನೀಡುವಂತೆ ಒತ್ತಾಯ

ಜೆ.ಡಿ.ಎಸ್.ಪಕ್ಷ ಜಿಲ್ಲೆಯಲ್ಲಿ ನಿಷ್ಕ್ರಿಯವಾಗಲು ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಮಾದವ ಗೌಡ ಅವರೇ ಕಾರಣರಾಗಿದ್ದು, ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಮುಖಂಡ ಅಬುಬಕ್ಕರ್ ಅಮ್ಮಂಜೆ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಧ್ಯಕ್ಷ...