Saturday, April 13, 2024

ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ

ಸುಬ್ರಹ್ಮಣ್ಯ: ಕುಮಾರಧಾರಾ ನದಿಯ ಪಂಜ – ಕಡಬ ಸಂಪರ್ಕ ರಸ್ತೆಯಲ್ಲಿ ಸಿಗುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದೆ.

ಶುಕ್ರವಾರ ನದಿಯ ಒಂದು ಬದಿಯ ನೀರಿನಲ್ಲಿ ಅಂದಾಜು 1.5 – 2 ವರ್ಷದ ಮೊಸಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದು ಗುರುವಾರ ಹಗಲು ಆಥವಾ ರಾತ್ರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಅಗಮಿಸಿ ಮೃತದೇಹವನ್ನು ತೆರವು ಮಾಡಿದ್ದಾರೆ.

ಮೊಸಳೆಯ ಮೃತದೇಹ ಪತ್ತೆಯಾದಲ್ಲಿ ಮೀನುಗಳು ಕೂಡ ಇದ್ದು ಅವುಗಳಿಗೆ ಏನೂ ಆಗಿಲ್ಲ. ಅಲ್ಲದೆ ಮೃತದೇಹ ಸಿಕ್ಕಿರುವ ಸ್ಥಳದಲ್ಲಿ ನೀರು ಹರಿಯುತ್ತಿದೆ. ಇನ್ನೊಂದು ಮೊಸಳೆಯ ಜತೆಗಿನ ಕಾಳಗದಲ್ಲಿ ಸಾವನ್ನಪ್ಪುವ ಸಾಧ್ಯತೆ ಇದ್ದರೂ ದೇಹದಲ್ಲಿ ಗಾಯ ಕಂಡುಬಂದಿಲ್ಲ. ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸಿ ವರದಿ ನೀಡಲಿದ್ದು, ಬಳಿಕವೇ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್‌ ತಿಳಿಸಿದ್ದಾರೆ

More from the blog

ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ : ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿರವರು ಏಪ್ರಿಲ್ 14 ರಂದು ಮಂಗಳೂರಿನ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್‌ವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಹಾಗೂ ಸಂಚಾರ ಸುವ್ಯವಸ್ಥೆಗೆ...

ಎಳನೀರು ಸೇವಿಸಿ 136 ಮಂದಿ ಅಸ್ವಸ್ಥ ಪ್ರಕರಣ : ಬೊಂಡ ಫ್ಯಾಕ್ಟರಿ ಬಂದ್‌ ಗೆ ಆದೇಶ

ಮಂಗಳೂರು: ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಯ ಬೊಂಡ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ಬೊಂಡ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ. ದ.ಕ.ಜಿಲ್ಲಾ ಆರೋಗ್ಯ...

ಚಿನ್ನದ ದರ ಮತ್ತೆ ಏರಿಕೆ : ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ..?

ಚಿನ್ನ ದಿನದಿಂದ ದಿನಕ್ಕೆ ಶಾಕ್​ ನೀಡುತ್ತಾ ಬರುತ್ತಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ಅರವತ್ತು ಸಾವಿರದ ಗಡಿಯಲ್ಲಿದ್ದ ಬಂಗಾರ ಏಪ್ರಿಲ್ ನಲ್ಲಿ ಇದೀಗ ಎಪ್ಪತ್ತು ಸಾವಿರದ ಗಡಿ ದಾಟಿದೆ. ಕೇವಲ ಒಂದು ತಿಂಗಳ...

ಪ್ರಧಾನಿ ರೋಡ್ ಶೋ ಹಿನ್ನೆಲೆ : ಜೇನುಗೂಡು ತೆರೆವುಗೊಳಿಸಲು ಮಂಗಳೂರು ಪೊಲೀಸ್ ಆಯುಕ್ತರ ಆದೇಶ

ಮಂಗಳೂರು: ನಗರದಲ್ಲಿ ಏ.14ರಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಯಲಿರುವ ಮಾರ್ಗದಲ್ಲಿ ಇರುವ ಎಲ್ಲ ಜೇನುಗೂಡುಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್‌ ಅವರು ಉಪಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ...