ಸುರತ್ಕಲ್: ಸುರತ್ಕಲ್ ಸಮೀಪದ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಖ್ಯಾತ ಚಲನ ಚಿತ್ರನಟಿ ತುಳುನಾಡಿನ ವರಾದ ಶಿಲ್ಪಾ ಶೆಟ್ಟಿ ಭೇಟಿ ನೀಡಿ ಬ್ರಹ್ಮಕುಂಭಾಭಿಷೇಕದ ಅಂಗವಾಗಿ ಪ್ರಧಾನ ಬೆಳ್ಳಿ ಕಲಶವನ್ನು ಸಮರ್ಪಿಸಿದರು.
ನಾಗಮಂಡಲ ನಡೆಯುವ ವೇದಿಕೆಗೆ ತಮ್ಮ ಮಕ್ಕಳೊಂದಿಗೆ ಭೇಟಿ ನೀಡಿ ಹಿಂಗಾರ ನೀಡಿ ಪ್ರಾರ್ಥಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕ್ಷೇತ್ರದ ಐತಿಹ್ಯದ ಬಗ್ಗೆ ತಿಳಿದಿದ್ದೇನೆ. ಬೆಳ್ಳಿಯ ಕಲಶವನ್ನು ನೀಡಿದ್ದೇನೆ. ದೈವ ದೇವರು ಸಂಕಷ್ಟ ಬಗೆ ಹರಿಸಿ ಕುಟುಂಬಕ್ಕೆ ಒಳ್ಳೆದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ. ಮುಂದೊಂದು ದಿನ ಮತ್ತೆ ಬರುವೆ ಎಂದರು.