Monday, April 15, 2024

ಶರಾಬು ಕುಡಿಯಲು ಆಕ್ಷೇಪ… ಯುವಕನಿಗೆ ಹಲ್ಲೆ : ದೂರು, ಪ್ರತಿದೂರು ದಾಖಲು

ಮಚ್ಚಿನ: ಹೊಟೇಲ್‌ ಕಾರ್ಮಿಕನನ್ನು ಶರಾಬು ಕುಡಿಯಲು ಕರೆಯಬಾರದು ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ಸಂಭವಿಸಿದೆ.

ಮಚ್ಚಿನದ ಪ್ರತಿಭಾ ರೈ ಅವರ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಅವರನ್ನು ಆರೋಪಿ ಕೇಶವ ಪೂಜಾರಿ ಶರಾಬು ಕುಡಿಯಲು ಕರೆದಾಗ ಪ್ರತಿಭಾ ಅವರು ಆಕ್ಷೇಪಿಸಿದಾಗ ಕೇಶವ ಪೂಜಾರಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಈ ಬಗ್ಗೆ ಪ್ರತಿಭಾ ಅವರ ಪುತ್ರ ಹೃತಿಕ್‌ ರೈ ಆರೋಪಿತನ ಬಳಿ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಬಯ್ಯಬಾರದು ಎಂದು ತಿಳಿ ಹೇಳಿ ಬರುತ್ತಿದ್ದಂತೆ ಆರೋಪಿಯು ಹೃತಿಕ್‌ಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಗಲಾಟೆ ಬಿಡಿಸಲು ಬಳಿ ಬಂದ ಹೊಟೇಲಿನ ಕೆಲಸದಾಳು ಚಂದ್ರ ಅವರಿಗೆ ಕೂಡ ಆರೋಪಿ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರತಿಭಾ ರೈ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರತಿದೂರು:

ಕೇಶವ ಪೂಜಾರಿ ಅವರು ಹೃತಿಕ್‌ ರೈ ಹಾಗೂ ಚಂದ್ರ ಅವರ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರತಿದೂರನ್ನು ನೀಡಿದ್ದು, ಈ ಎರಡೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

More from the blog

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

ಚೂರಿ ಇರಿತಕ್ಕೊಳಗಾಗಿ ಮಂಗಳೂರು ಏ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಇವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆರೋಗ್ಯ ವಿಚಾರಿಸಿ,ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರುಗಳೊಂದಿಗೆ ಮಾಹಿತಿ ಪಡೆದರು.

ಹಿಂದೂ‌ ಸಂಘಟನೆಯ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಯುವಸೇನೆಯ ಮುಖಂಡನಾಗಿದ್ದು, ಉದ್ಯಮಿಯಾಗಿರುವ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ.) 37ನೇ ವಾರ್ಷಿಕೋತ್ಸವ ಸಮಾರಂಭ

ಬಂಟ್ವಾಳ : ಈ ಮಣ್ಣಿನ ಸಂಸ್ಕೃತಿ, ಮೌಲ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ, ಈ ನಿಟ್ಟಿನಲ್ಲಿ ನವೋದಯ ಮಿತ್ರ ಕಲಾ ವೃಂದವು ಸಮಾಜಕ್ಕೆ ಪೂರಕವಾಗಿ ಸಮಾಜಮುಖಿ ಕಾರ್ಯಗಳನ್ನು...

ಲೋಕಸಭಾ ಚುನಾವಣೆ : ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ...