Friday, April 5, 2024

ನಂದನಹಿತ್ಲು ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಇಲ್ಲಿನ ಪೇಟಯಲ್ಲಿರುವ ನಂದನಹಿತ್ಲು ವೈದ್ಯನಾಥ,ಅರಸು,ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲವಧಿಯ ನೇಮೋತ್ಸವವು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು.

ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿವರ ನೇತೃತ್ವದಲ್ಲಿ‌ ನಡೆದ ವಿವಿಧ ವೈಧಿಕ ವಿಧಿವಿಧಾನಗಳ ಬಳಿಕ ಮೊದಲದಿನ ಶ್ರೀ ಅರಸು,ಎರಡನೇ ದಿನ ಜುಮಾದಿಬಂಟ ಹಾಗೂ ಬುಧವಾರ ರಾತ್ರಿ ಕ್ಷೇತ್ರದ ಪ್ರಧಾನ ದೈವ ವೈದ್ಯನಾಥನ ನೇಮೋತ್ಸವ,ಕಂಚಿಲ ಸೇವೆ ಪೇಟೆಯಲ್ಲಿ ಬಂಡಿ ಸವಾರಿ, ವಿಜೃಂಭಣೆಯಿಂದ ನಡೆಯಿತು.

ಗುರುವಾರ ಮುಂಜಾನೆ ಕ್ಷೇತ್ರದಿಂದ ಹೊರಟ ವೈದ್ಯನಾಥ ದೈವ ಸಹಿತ ಬಂಡಿರಥ

ಬಡ್ಡಕಟ್ಟೆಯ ಗಡಿಭಾಗದ ವರೆಗೆ ತೆರಳಿ ವಲಸರಿ‌ಸೇವೆ ನಡೆದು ಬಳಿಕ ವಾಪಾಸ್ ದೈವಸ್ಥಾನಕ್ಕೆ ಅಗಮಿಸಿತು.ದೈವದಿಂದ ಭಕ್ತರಿಗೆ ಪ್ರಸಾದ ವಿತರಣೆಯ ನಂತರ ಸಂಪನ್ನಗೊಂಡಿತು.ಕ್ಷೇತ್ರದ ಆಡಳಿತ ಸಮಿತಿ‌ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ಕ್ಷೇತ್ರದ ಮನೆತನಗಳಿಗೆ ಸಂಬಂಧಿಸಿ ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು, ಸಂಜೀವಪೂಜಾರಿ ಪೆಲತ್ತಿಮಾರು,ಲೋಕೇಶ್ ಬಂಗೇರ ಗಾಣದಪಡ್ಪು,ಲೋಕನಾಥ ಬಂಗೇರ, ಬಾಳಿಗಾ ಮನೆತನದ ಸುಧೀರ್ ಬಾಳಿಗಾ ಅವರು ಕೊಡುಗೆಯಾಗಿ ಸಮರ್ಪಿಸಿದರು.

ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿ

ಕ್ಷೇತ್ರದ ಆಡಳಿತ ಸಮಿತಿ‌ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ಕ್ಷೇತ್ರದ ಮನೆತನಗಳಿಗೆ ಸಂಬಂಧಿಸಿ ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು,ಸಂಜೀವಪೂಜಾರಿ ಪೆಲತ್ತಿಮಾರು,ಲೋಕೇಶ್ ಬಂಗೇರ ಗಾಣದಪಡ್ಪು,ಲೋಕನಾಥ ಬಂಹೇರ ಬಡಕೊಟ್ಟು,ಬಾಳಿಗಾ ಮನೆತನದ ಸುಧೀರ್ ಬಾಳಿಗ,ಭುವನೇಶ್ ಶೆಟ್ಟಿ ,ಸದಾಶಿವ ಶೆಣೈ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ದೈವಸ್ಥಾನಕ್ಕೆ ಈ ವರ್ಷ ನೂತನ ಧ್ವಜಸ್ತಂಭವನ್ನು‌ಸಮರ್ಪಿಸಲಾಗಿತ್ತು.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...

ವ್ಯಕ್ತಿಯ ಮನೆಗೆ ನುಗ್ಗಿ ಹಲ್ಲೆ : ಪ್ರಕರಣ ದಾಖಲು

ಬಂಟ್ವಾಳ: ಸಾಲ ಪಡೆದುಕೊಂಡ ವ್ಯಕ್ತಿಯೋರ್ವ ಸಾಲ ಮರುಪಾವತಿ ಮಾಡದೆ, ಕೇಳಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಸಿದ್ದಕಟ್ಟೆಯ ಸಂಗಬೆಟ್ಟು ಎಂಬಲ್ಲಿ ನಡೆದಿದ್ದು,ಬಂಟ್ವಾಳ ಗ್ರಾಮಾಂತರ ‌ಪೋಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ಸಂಗಬೆಟ್ಟು ಗ್ರಾಮದ ಕೊಮ್ಮಡ...