Friday, April 19, 2024

ಏಪ್ರಿಲ್ 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 25 ಮತ್ತು 26ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಏ.25ರ ಸಂಜೆ 6ರಿಂದ 26ರ ರಾತ್ರಿ 8ರ ವರೆಗೂ ನಿರ್ಬಂಧ ಇರಲಿದೆ. ಈ ದಿನಗಳಲ್ಲಿ ನಂದಿ ಗಿರಿಧಾಮದಲ್ಲಿರುವ ಅತಿಥಿ ಗೃಹಗಳಿಗೂ ಬೀಗ ಹಾಕಲಾಗುವುದು ಎಂದು ಚಿಕ್ಕಬಳ್ಳಾಪುರ ಡಿಸಿ ಆದೇಶ ತಿಳಿಸಿದೆ.

ಏಪ್ರಿಲ್ 26 ಶುಕ್ರವಾರ ಬರುತ್ತದೆ. ಲೋಕಸಭೆ ಚುನಾವಣೆ ಪ್ರಯುಕ್ತ ಅಂದು ಸರ್ಕಾರಿ ರಜೆ ಘೋಷಿಸಲಾಗಿದೆ. ಖಾಸಗಿ ಕಂಪನಿಗಳೂ ಸಹ ರಜೆ ನೀಡುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ, ಮತದಾನದ ದಿನ ಶುಕ್ರವಾರ ಬರುತ್ತದೆ. ಮರುದಿನ ಶನಿವಾರ ಹಾಗೂ ಅದರ ಮರುದಿನ ಭಾನುವಾರ ಆದ್ದರಿಂದ ಸತತ ಮೂರು ದಿನ ರಜೆ ಎಂದು ಜನ ಪ್ರವಾಸಕ್ಕೆ ಯೋಜನೆ ಮಾಡಿದರೆ ಮತದಾನದ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಬಳ್ಳಾಪುರ ಡಿಸಿ ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಏಪ್ರಿಲ್ 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್​​ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಜನರು ಪ್ರವಾಸ ಬರುವುದನ್ನು ತಪ್ಪಿಸಲು ಮತ್ತು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿಯೇ ಈ ಕ್ರಮವನ್ನು ಕೈಗೊಳ್ಳಲಾಗಿದೆ.

More from the blog

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ರಾಜ್ಯದಲ್ಲಿ ಮತ್ತೆ ಏರಿದ ತಾಪಮಾನ

ಬೆಂಗಳೂರು: ಕಳೆದೊಂದು ವಾರದಿಂದ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ; ರಾಮಲಲ್ಲಾ ಹಣೆ ಮೇಲೆ ಸೂರ್ಯ ತಿಲಕ

ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಮೊದಲ ರಾಮನವಮಿಯಂದು ರಾಮಲಲ್ಲಾನಿಗೆ ಸೂರ್ಯನ ತಿಲಕ ಸ್ಪರ್ಶಿಸಿದ್ದು, ಸೂರ್ಯವಂಶಸ್ಥನಿಗೆ ಸೂರ್ಯನ ಅಭಿಷೇಕ ನೆರವೇರಿಸಲಾಗಿದೆ. ರಾಮನವಮಿ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ...

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇವರು1942 ಆಗಸ್ಟ್ 19ರಂದು ಮೈಸೂರು...