Monday, April 29, 2024

ಎ.30-ಮೇ.1: ಮಂಗಳೂರಿನ ಈ ಭಾಗಗಳಲ್ಲಿ ನೀರು ಸರಬರಾಜು ಸ್ಥಗಿತ

ಮಂಗಳೂರು: ಎ.30ರ ಬೆಳಗ್ಗೆ 6 ಗಂಟೆಯಿಂದ ಮೇ 1ರ ಬೆಳಗ್ಗೆ 6 ಗಂಟೆಯವರೆಗೆ ಮಂಗಳೂರಿನಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ

ನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದಂದ ಮಂಗಳೂರು ನಗರಕ್ಕೆ ಬರುವ ಕೊಳವೆ ಕಾಮಗಾರಿ ಕೆಲಸ ನಡೆಯಲಿರುವ ಕಾರಣ 24 ಗಂಟೆ ಅವಧಿಯಲ್ಲಿ ನೀರು ಸರಬರಾಜು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಈ ಅವಧಿಯಲ್ಲಿ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು, ಫಳ್ನೀರ್, ಮುಳಿಹಿತ್ಲು, ಬೋಳಾರ, ಕಾರ್ ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಶಕ್ತಿನಗರ, ಬಜಾಲ್, ಜೆಪ್ಪಿನಮೊಗರು, ಕಣ್ಣೂರು, ಅಳಪೆ, ಅತ್ತಾವರ, ಉಲ್ಲಾಸ್ ನಗರ, ಚಿಲಿಂಬಿ, ಕೋಡಿಕಲ್, ಊರ್ವಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು ಮತ್ತು ಮರಕಡ ಭಾಗಶಃ ಇತ್ಯಾದಿ ಪ್ರದೇಶಗಳಿಗೆ ನೀರು ಸರಬರಾಜು ಸ್ಥಗಿತವಾಗಲಿದೆ.

More from the blog

ಮದುವೆ ಆಮಂತ್ರಣದಲ್ಲಿ ಪ್ರಧಾನಿ ಮೋದಿಯನ್ನು ಗೆಲ್ಲಿಸುವಂತೆ ಉಲ್ಲೇಖ : ನೀತಿ ಸಂಹಿತೆಯಡಿ ಪ್ರಕರಣ ದಾಖಲು

ಉಪ್ಪಿನಂಗಡಿ: ಚುನಾವಣ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ “ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧೂವರರಿಗೆ ನೀಡುವ ಉಡುಗೊರೆ’ ಎಂದು ದಾಖಲಿಸಿರುವುದಕ್ಕೆ ವರನ ವಿರುದ್ದ ನೀತಿ...

ಧರೆಗೆ ಉರುಳಿದ ಮಾವಿನ ಮರ : ಮಾವಿನ ಕಾಯಿಗೆ ಮುಗಿ ಬಿದ್ದ ಜನ

ಪುತ್ತೂರು: ಪುತ್ತೂರು ಬೊಳುವಾರು ಬಸ್‌ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರೀ ಗಾತ್ರದ ಮಾವಿನ ಮರವೊಂದು ಧರಶಾಯಿಯಾಗಿದ್ದು, ಬಿದ್ದ ಮರದಲ್ಲಿದ್ದ ಮಾವಿನ ಕಾಯಿಗಳನ್ನು ಕೊಯ್ಯಲು ಜನ ಮುಗಿ ಬಿದ್ದ ಘಟನೆ ನಡೆಯಿತು. ಸದಾ ಜನರ ಸಂಪರ್ಕದಲ್ಲಿರುವ...

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಸುರತ್ಕಲ್‌: ಸುರತ್ಕಲ್‌ ಸಮೀಪದ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ ಖ್ಯಾತ ಚಲನ ಚಿತ್ರನಟಿ ತುಳುನಾಡಿನ ವರಾದ ಶಿಲ್ಪಾ ಶೆಟ್ಟಿ ಭೇಟಿ ನೀಡಿ ಬ್ರಹ್ಮಕುಂಭಾಭಿಷೇಕದ ಅಂಗವಾಗಿ ಪ್ರಧಾನ ಬೆಳ್ಳಿ ಕಲಶವನ್ನು ಸಮರ್ಪಿಸಿದರು. ನಾಗಮಂಡಲ ನಡೆಯುವ ವೇದಿಕೆಗೆ...

ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು : ಕುಟುಂಬಸ್ಥರು ಕಂಗಾಲು

ಉಪ್ಪಿನಂಗಡಿ: ಮದುವೆ ಮಂಟಪದಲ್ಲಿ ವರನಿಂದ ತಾಳಿ ಕಟ್ಟಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯಲ್ಲಿದ್ದ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ. ಕೊಣಾಲು ಗ್ರಾಮದ ಕೋಲ್ಪೆ ದಿ| ಬಾಬು...