Saturday, April 13, 2024

ಜಮೀನಿನ ವಿಚಾರದಲ್ಲಿ ತಕರಾರು ನಡೆಸಿ ಹಲ್ಲೆ ಪ್ರಕರಣ : ಶಿಕ್ಷೆ ಪ್ರಕಟ

ಬಂಟ್ವಾಳ: ಜಮೀನಿನ ವಿಚಾರದಲ್ಲಿ ತಕರಾರು ಉಂಟಾಗಿ ಹಲ್ಲೆ ನಡೆಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶಿಕ್ಷೆ ಪ್ರಕಟಗೊಳಿಸಿದ ಬಗ್ಗೆ ವರದಿಯಾಗಿದೆ.

ದೇವಸ್ಯ ಪಡೂರು ಗ್ರಾಮ,ಕುಟ್ಟಿಕಳ ,ಅಲ್ಲಿಪಾದೆ ಎಂಬಲ್ಲಿ ನೀಲಯ್ಯ ಮೂಲ್ಯ ಹಾಗೂ ಶ್ರೀನಿವಾಸ್ ಪೂಜಾರಿ ರವರಿಗೆ ಸಿವಿಲ್ ವ್ಯಾಜ್ಯವಿದ್ದು, ನವೆಂಬರ್ 8 2018 ರಂದು ರಾತ್ರಿ ದೀಪಾವಳಿ ಹಬ್ಬದ ಪ್ರಯುಕ್ತ ,ನೀಲಯ್ಯ ಮೂಲ್ಯರ ಮನೆಗೆ ಸಂಬಂಧಿಕರು ಬಂದು, ಕಾರಿನಲ್ಲಿ ಹೊರಡುವ ವೇಳೆ, ತಕರಾರಿರುವ ಜಾಗದಲ್ಲಿ ಇಟ್ಟಿರುವ ಮರದ ಹಲಗೆಯನ್ನು ತೆಗೆದಾಗ , ಶ್ರೀನಿವಾಸ್ ಪೂಜಾರಿ ಮಕ್ಕಳಾದ ಸಾಗರ್ ಮತ್ತು ಸಂತೋಷ್ ನೀಲಯ್ಯ ಮೂಲ್ಯರಿಗೆ ಹಲ್ಲೆ ನಡೆಸಿ, ಗಾಯಗೊಳಿಸಿದ ವಿಚಾರವಾಗಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್.ಐ.ಪ್ರಸನ್ನ ಎಂ .ಎಸ್ .ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ಎಸಿಜೆ ಮತ್ತು ಜೆ ಎಂ ಎಫ್ ಸಿ ಬಂಟ್ವಾಳ ನ್ಯಾಯಾಧೀಶರಾದ ಶ್ರೀಕೃಷ್ಣ ಮೂರ್ತಿ‌. ಎನ್. ರವರು ದಿನಾಂಕ 06/04/2024 ರಂದು ಆರೋಪಿಗಳಾದ ಸಂತೋಷ ಮತ್ತು ಸಾಗರ್ ಅವರಿಗೆ ಎರಡು ವರ್ಷಗಳ ಸಜೆ ಹಾಗೂ ತಲಾ 5,000 ಜುಲ್ಮನೆ ನೀಡಿ ಶಿಕ್ಷೆ ವಿಧಿಸಿರುತ್ತಾರೆ .

ಸರಕಾರದ ಪರ ಸರ್ಕಾರಿ ಸಹಾಯಕ ಅಭಿಯೋಜಕಿ ಸರಸ್ವತಿ ರವರು ವಾದ ಮಂಡಿಸಿದ್ದರು.

More from the blog

ಮನೆ ಮನೆಗೆ ತೆರಲಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಮಯ್ಯರಬೈಲು: ಏ.14 ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುಗಾದಿ ಉತ್ಸವ ಕಾರ್ಯಕ್ರಮ

ಮಾತೃಭೂಮಿ ಯುವ ಬಳಗ ಹಾಗೂ ಮಾತೃಭೂಮಿ ಮಹಿಳಾ ಮಂಡಳಿ ಮಯ್ಯರಬೈಲು ಇವರ ಜಂಟಿ ಅಶ್ರಯದಲ್ಲಿ ಚತುರ್ಥ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯುಗಾದಿ ಉತ್ಸವ ಕಾರ್ಯಕ್ರಮ ಏ.14 ರಂದು ಮಯ್ಯರಬೈಲಿನಲ್ಲಿ...

ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಮತ್ತು ಯುವ ಸ್ಪಂದನ ಸಮಾಲೋಚನೆ ಸೇವೆಗಳ ಕುರಿತು ಕಾರ್ಯಕ್ರಮ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಕಾಮಾಜೆ ಇಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಕೇಂದ್ರ ಎಪಿಡಿಮಿಯೋಲಜಿ ವಿಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಬೆಂಗಳೂರು,...