ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 14 ಕ್ಷೇತ್ರಗಳಿಗೆ ಮತದಾನ ನಡೆಯಿತು. ಸಂಜೆ 7 ಗಂಟೆಯ ವೇಳೆಗೆ ಬಂದ ಮಾಹಿತಿ ಪ್ರಕಾರ 14 ಕ್ಷೇತ್ರಗಳಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ.
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ 49 % ಮತದಾನ ನಡೆದಿದೆ. ಬೆಂಗಳೂರು ದಕ್ಷಿಣದಲ್ಲೂ 49 % ಮತದಾನ ನಡೆದಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 51 %, ಹೈವೋಲ್ಟೇಜ್ ಬೆಂಗಳೂರು ಗ್ರಾಮಾಂತರದಲ್ಲಿ 61 % ಮತದಾನವಾಗಿದೆ ಎಂದು ವಿವರಗಳು ಲಭ್ಯವಾಗಿವೆ
ಚಾಮರಾಜನಗರದಲ್ಲಿ 69 %, ಚಿಕ್ಕಬಳ್ಳಾಪುರದಲ್ಲಿ 71% , ಚಿತ್ರದುರ್ಗದಲ್ಲಿ 67% , ದಕ್ಷಿಣ ಕನ್ನಡದಲ್ಲಿ 72% , ಹಾಸನದಲ್ಲಿ 72% , ಕೋಲಾರದಲ್ಲಿ 73% ಮತದಾನವಾಗಿದೆ.
ಮಂಡ್ಯದಲ್ಲಿ ಅತಿ ಹೆಚ್ಚು ಅಂದ್ರೆ, 74.87 % ಮತಗಳು ಚಲಾವಣೆಯಾಗಿರುವ ಬಗ್ಗೆ ವರದಿಯಾಗಿದೆ. ಮೈಸೂರು -ಕೊಡಗು 66 % , ತುಮಕೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 72 % ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.