Friday, April 5, 2024

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ.

ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ. ಇದೆ. ವಿದೌಟ್‌ ಸ್ಕಿನ್‌ ಮಾಂಸಕ್ಕೆ 265-270 ರೂ. ಇದೆ. ಸಜೀವ ಕೋಳಿ ಬ್ರಾಯ್ಲರ್‌ಗೆ ಕೆ.ಜಿ.ಗೆ 165-170 ರೂ. ಇದ್ದರೆ, ಟೈಸನ್‌ ಕೋಳಿ ಕೆ.ಜಿ.ಗೆ 185-190 ರೂ. ಇದೆ. ಒಂದು ವಾರದಿಂದ ಕೋಳಿ ಮಾಂಸದ ದರದಲ್ಲಿ ಏರಿಕೆಯಾಗುತ್ತಿದ್ದು, ಪ್ರತೀದಿನ ಅಥವಾ 2-3 ದಿನಗಳಿಗೆ 5-6 ರೂ. ವರೆಗೆ ಹೆಚ್ಚಳವಾಗುತ್ತಿದೆ.

ಕಡಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗಿರುವುದರಿಂದ ಬಹುತೇಕ ಬೋಟುಗಳು ಸಮುದ್ರಕ್ಕೆ ತೆರಳದೆ ಬಂದರಿನಲ್ಲೇ ಉಳಿದಿವೆ. ಬೇಡಿಕೆಗೆ ತಕ್ಕಂತೆ ಮೀನು ದೊರೆಯದ ಪರಿಣಾಮ ಮೀನಿನ ದರದಲ್ಲಿಯೂ ಏರಿಕೆಯಾಗಿದೆ. ಬಹುತೇಕ ಎಲ್ಲ ಮೀನುಗಳ ದರ ಕೆ.ಜಿ.ಗೆ 200 ರೂ. ದಾಟಿದೆ.

ಖಾದ್ಯಗಳ ರುಚಿ ಹೆಚ್ಚಿಸುವ ಶುಂಠಿ ದರವೂ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದು, ಕೆ.ಜಿ.ಗೆ 160-200 ರೂ. ವರೆಗೆ ಏರಿದೆ. ಈ ಮೊದಲು ಕೆ.ಜಿ. 120 ರೂ. ಇತ್ತು. ಮಂಗಳೂರು ಮಾರುಕಟ್ಟೆ ಯಲ್ಲಿ ಕೊತ್ತಂಬರಿ ಸೊಪ್ಪು ಅಭಾವವುಂಟಾಗಿದ್ದು, 10 ರೂ.ಗೆ 100 ಗ್ರಾಂ. ದೊರೆಯುತ್ತಿದ್ದ ಕೊತ್ತಂಬರಿ ಸೊಪ್ಪಿನ ದರ ಪ್ರಸ್ತುತ 15 ರೂ.ಗೆ ಏರಿದೆ.

ಮಾರುಕಟ್ಟೆಯಲ್ಲಿ ಮೀನು, ಕೋಳಿ ದರ ಏರಿಕೆಯ ಪರಿಣಾಮವಾಗಿ ಹೊಟೇಲ್‌ಗ‌ಳಲ್ಲಿ ಮಾಂಸಾಹಾರದ ದರವೂ ಏರಿಕೆಯಾಗಿದೆ. ಅತೀ ಹೆಚ್ಚು ಬೇಡಿಕೆಯಲ್ಲಿರುವ ಚಿಕನ್‌ ಸುಕ್ಕಾ, ಚಿಲ್ಲಿ, ಕಬಾಬ್‌ ಮೊದಲಾದವುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಮೀನುಗಳಲ್ಲಿ ಗಾತ್ರಕ್ಕೆ ಅನುಗುಣವಾಗಿ ದರ ಹೆಚ್ಚು ಕಡಿಮೆ ಮಾಡುವುದೂ ಕಂಡುಬಂದಿದೆ. ತರಕಾರಿ ದರದಲ್ಲಿ ಏರಿಕೆಯಾಗಿದ್ದರೂ ಸಸ್ಯಾಹಾರಿ ಹೊಟೇಲ್‌ಗ‌ಳಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.

 

More from the blog

ಸಾವು ಗೆದ್ದು ಬಂದ ಸಾತ್ವಿಕ್ ; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಬುಧವಾರ ನಾಮಪತ್ರ ಸಲ್ಲಿಸಿದರು. ಇನ್ನು ಕೋಟ ಶ್ರೀನಿವಾಸ್ ಪೂಜಾರಿ ಅವರು ನಾಮಪತ್ರ ಸಲ್ಲಿಸುವ ಮುನ್ನ ಪಕ್ಷದ ಕಾರ್ಯಕರ್ತರ ಬೃಹತ್‌ ಸಮಾವೇಶ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...