ಬಂಟ್ವಾಳ: ವಿವಾಹ ಮಂಟಪದಿಂದ ಮದುಮಗನೋರ್ವ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾನೆ.. ಮಾಣಿಲ ಬೂತ್ ಸಂಖ್ಯೆ 88 ರಲ್ಲಿ ನವೀನ್ ಎಂಬಾತ ಮತದಾನ ಮಾಡಿದ ಪೋಟೋ ಸಖತ್ ವೈರಲ್ ಆಗಿದೆ.
ಮದುವೆ ಮುಗಿಸಿ ಮನೆಗೆ ತೆರಳಬೇಕಾದ ಮದುಮಗ ನವೀನ್ ಅದರ ಬದಲಾಗಿ ನೇರವಾಗಿ ಮತಗಟ್ಟೆಗೆ ತೆರೆಳಿ ಮತದಾನ ಮಾಡಿದ್ದಾನೆ