Monday, April 29, 2024

ಹೆದ್ದಾರಿ ಡಿವೈಡರ್ ಪಕ್ಕದಲ್ಲಿ ಅಪಾಯಕಾರಿ ಮಣ್ಣಿನ ರಾಶಿ : ಸಂಭಾವ್ಯ ಅಪಾಯವನ್ನು ತಪ್ಪಿಸುವಂತೆ ಮನವಿ

ಬಿ.ಸಿ.ರೋಡ್ ನ ಕೈಕಂಬ ಸಮೀಪ ಎಲ್ಲೈಸಿ ಕಚೇರಿಯ ಮುಂಭಾಗ ಹೆದ್ದಾರಿಯ ಡಿವೈಡರ್ ಪಕ್ಕದಲ್ಲಿ ಮಣ್ಣಿನ ರಾಶಿ ಇದ್ದು, ಇದಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ಸವಾರರು ಬಿದ್ದ ಘಟನೆಗಳು ನಡೆದಿವೆ.

ಕೆಲ ದಿನಗಳಿಂದ ಇಲ್ಲಿ ಕೆಲಸಗಳು ನಡೆಯುತ್ತಿದ್ದು, ಮಣ್ಣನ್ನು ಹಾಗೆಯೇ ಬಿಟ್ಟು ಹೋದ ಪರಿಣಾಮ, ಈ ಭಾಗದಲ್ಲಿ ಮಂಗಳೂರಿನಿಂದ ಬಿ.ಸಿ.ರೋಡಿಗೆ ಸಂಚರಿಸುವ ವಾಹನಗಳ ಸವಾರರು ಗಲಿಬಿಲಿಗೊಳ್ಳುವಂತಾಗಿದೆ.

ರಾತ್ರಿಯ ವೇಳೆಗಂತೂ ತೀರಾ ಅಪಾಯಕಾರಿಯಾಗಿ ಈ ಮಣ್ಣಿನ ದಿಬ್ಬ ಕಾಣಿಸಿಕೊಂಡಿದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಇನ್ನೂ ತೆರವುಗೊಳಿಸುವ ಕಾರ್ಯವನ್ನು ಮಾಡಿಲ್ಲ. ಇತ್ತೀಚೆಗೆ ದ್ವಿಚಕ್ರವಾಹನವೊಂದು ಮಣ್ಣಿನ ದಿಬ್ಬಕ್ಕೆ ತಾಗಿ ನೆಲಕ್ಕೆ ಬಿದ್ದ ಮೇಲೆ ಸ್ಥಳೀಯರೇ ಇಲ್ಲಿ ಎಚ್ಚರಿಕೆಯ ಫಲಕವನ್ನು ಹಾಕಿದ್ದಾರೆ.

ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.

More from the blog

ಕೆದಂಬಾಡಿ: ಯುವಕ ನಾಪತ್ತೆ

ಪುತ್ತೂರು: ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿಯೊಬ್ಬರು ನಾಪತ್ತೆಯಾದ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಮೂಲೆ ದಿ.ಸಂಖಪ್ಪ ಪೂಜಾರಿ ಅವರ ಪುತ್ರ ದಿವಾಕರ ನಾಪತ್ತೆಯಾದವರು. ಅರಿಯಡ್ಕ ಗ್ರಾಮದ ಕೆರೆಮೂಲೆಯವರಾದ ದಿವಾಕರ ಅಡುಗೆ ಕೆಲಸಕ್ಕೆ ಸಹಾಯಕರಾಗಿ ಹೋಗುತ್ತಿದ್ದು,...

ಮೇ.03ರಂದು ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ

ಬಂಟ್ವಾಳ : ಕಲ್ಲಡ್ಕ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮೇ.03ರಂದು ಶ್ರೀ ಕಲ್ಲುರ್ಟಿ ದೈವದ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಮೇ.02ರಂದು...

ಗುದನಾಳದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 54 ಲಕ್ಷ ರೂ ಮೌಲ್ಯದ ಚಿನ್ನ ಜಪ್ತಿ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ 54.3 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಆಗಮಿಸಿದ ಪ್ರಯಾಣಿಕನನ್ನು...

ಲೋಕಸಭಾ ಚುನಾವಣೆ, ಬಂಟ್ವಾಳದಲ್ಲಿ ಶೇ.79.9 ಮತದಾನ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂದಾಜು ಶೇ.79.9 ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ಶೇ.77.44 ರಷ್ಟು ಮತದಾನವಾಗಿದೆ. ಬಿಸಿಲನ್ನು ಲೆಕ್ಕಿಸದೆ, ಸೆಕೆಯ ನಡುವೆಯೂ ಮತದಾರರು ತನ್ನ ಜವಾಬ್ದಾರಿಯನ್ನು...