Tuesday, April 9, 2024

ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ, ಮನೆ, ಮನ ಅಭಿಯಾನ ಸಂಪರ್ಕಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಬೇಕು ಎಂಬ ಯೋಚನೆಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ ,ಮನೆ, ಮನ ಅಭಿಯಾನ ಸಂಪರ್ಕಕ್ಕೆ ಇಂದು ರಾಯಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹಾಗೂ ಜಿ‌.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಶರತ್ ಕುಮಾರ್ ಕೊಯಿಲ ಅವರ ಮನೆಯಲ್ಲಿ ಚಾಲನೆ ನೀಡಿದರು.

ಅವರು ರಾಯಿ ಗ್ರಾಮದಲ್ಲಿ ಮತದಾರರನ್ನು ಬೇಟಿ ಮಾಡಿ, ಕೆಲವೊಂದು ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು.

ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಪರಿಚಯ ಪತ್ರ, ಹಾಗೂ ಕೇಂದ್ರ ಸರಕಾರದ ಅಧಿಕಾರದ ಅವಧಿಯಲ್ಲಿ ಮಾಡಿದ ಸಾಧನೆ ಮತ್ತು ಯೋಜನೆಗಳ ಮಾಹಿತಿ ಪತ್ರವನ್ನು ಮತದಾರರಿಗೆ ನೀಡಿದರು. ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬ್ರಿಜೇಶ್ ಚೌಟ ಅವರನ್ನು ಅತ್ಯಂತ ಹೆಚ್ಚು ಮತಗಳ ‌ಅಂತರದಿಂದ ಗೆಲ್ಲಿಸಿಕೊಡುವಂತೆ ಮತದಾರರ ಲ್ಲಿ ಮನವಿ ಮಾಡಿದರು.

ಬಿಜೆಪಿಯ ಕನಸಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಆರ್ಟಿಕಲ್ಸ್ 370 ರದ್ದು ಹೀಗೆ ಬಿಜೆಪಿ ನೀಡಿರುವ ಭರವಸೆಯನ್ನು ಮೋದಿಜಿಯವರು ನೆರವೇರಿಸಿದ್ದಾರೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ‌ಮೋದಿಯವರು ಎ.14 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವ
ನಿಟ್ಟಿನಲ್ಲಿ ಮಂಗಳೂರಿಗೆ ಆಗಮಿಸಿಲಿದ್ದು, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಹಿಂದುತ್ವ ಮತ್ತು ಮೋದಿಯವರ ಅಭಿವೃದ್ಧಿ ಚಿಂತನೆಯ ಮೇಲೆ ಈ ಬಾರಿ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ. ಆದರೆ ಕೆಲವೊಂದು ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ದೃಷ್ಟಿಯಿಂದ 400 ಕ್ಕೂ ಅಧಿಕ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂಬ ಮೋದಿಯವರ ಕಲ್ಪನೆ ಸಾಕಾರಗೊಳ್ಳಲು ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದರು.

ರಾಯಿ ಗ್ರಾಮಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಉಪಾಧ್ಯಕ್ಷೆ ಗುಣಾವತಿ, ಸದಸ್ಯರಾದ ಸಂತೋಷ್ ಗೌಡ,ಉಷಾಸಂತೋಷ್, ಪ್ರಮುಖರಾದ ಹರೀಶ್ ಆಚಾರ್ಯ ರಾಯಿ,ಮಧುಕರ ಬಂಗೇರ, ವಸಂತ ಗೌಡ ಮುದ್ದಾಜೆ,ಚಂದ್ರಶೇಖರ್ ಗೌಡ ಕಾರಂಬಡೆ, ಶಿವಪ್ರಸಾದ್, ನವೀನ್ ಸಾಲ್ಕೋಡಿ,ಚೇತನ್ ಕೊಯಿಲ, ದಿನೇಶ್ ಸುವರ್ಣ ರಾಯಿ ಮತ್ತಿತರರು ಹಾಜರಿದ್ದರು.

More from the blog

ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ನಾರಿಶಕ್ತಿ ಮಹಿಳಾ ಸಮಾವೇಶ

ಬಂಟ್ವಾಳ: ನಾರಿ ಶಕ್ತಿ ಸಶಕ್ತರಾಗಬೇಕು ಎಂಬುದು ಮಹತ್ವದ ಕನಸು ಮತ್ತು ಪರಿಕಲ್ಪನೆಯಾಗಿದ್ದು, ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಣ ಮಾಡಿದ ಪಕ್ಷ ಬಿಜೆಪಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ...

ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷವದಿ ಜಾತ್ರೆಯು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು. ದಿನಾಂಕ 7-4-2024 ರ ರಾತ್ರಿ ಗಿಳಿಕಿಂಜ ಬಂಡಾರ ಮನೆಯಿಂದ ದೈವದ ಬಂಡಾರ...

ದಕ್ಷಿಣ ಕನ್ನಡ: ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್‌ : 9 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ 10 ಅಭ್ಯರ್ಥಿಗಳ...

ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯ : ಈ ರೀತಿಯ ಕಿತ್ತಾಳೆ ಹಣ್ಣು ನೋಡಿದ್ದೀರಾ…

ಬಂಟ್ವಾಳ: ಪಕೃತಿಯಲ್ಲಿ ಆಗೊಮ್ಮೆ ಈಗೊಮ್ಮೆ ವಿಚಿತ್ರ ಸಂಗತಿಗಳು ಕಾಣಸಿಗುತ್ತವೆ. ಹಾಗೇಯೆ ಇಲ್ಲೊಂದು ಕಿತ್ತಾಳೆ ಹಣ್ಣು ತನ್ನ ರೂಪದಲ್ಲಿ ಸ್ವಲ್ಪ ಮಟ್ಟಿಗೆ ವಿಚಿತ್ರ ಕಂಡಿದೆ. ಮಾಮೂಲಿಯಾಗಿ ಕಿತ್ತಾಳೆ ಬಣ್ಣ ಮತ್ತು ಆಕಾರದಲ್ಲಿ ಒಂದೇ ಆಗಿರುತ್ತದೆ. ಆದರೆ...