ಬಂಟ್ವಾಳ: ವೈದ್ಯರಲ್ಲಿಗೆ ಹೋಗಿದ್ದ ವ್ಯಕ್ತಿಯೋರ್ವ ಮನೆಗೆ ಬರದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇರಾ ಗ್ರಾಮದ ಕೆಂಜಿಲ ನಿವಾಸಿ ಏಕನಾಥ ( 39) ಕಾಣೆಯಾದ ವ್ಯಕ್ತಿಯಾಗಿದ್ದಾರೆ.
ಕಳೆದ ಒಂದು ವರ್ಷದಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕಲ್ಲಡ್ಕ ವೈದ್ಯರ ಬಳಿಗೆ ತೆರಳಿದವರು ವಾಪಸು ಮನೆಗೆ ಬಂದಿಲ್ಲ ಎಂದು ಅವರ
ತಮ್ಮ ಸುಜಿತ್ ಠಾಣೆಗೆ ದೂರು ನೀಡಿದ್ದಾರೆ.
ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಿದ್ದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯನ್ನು ಸಂಪರ್ಕ ಮಾಡಲು ಮನವಿ ಮಾಡಿದ್ದಾರೆ.