ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು, ಸೆಕೆಯನ್ನು ಲೆಕ್ಕಿಸದೆ ಮತದಾನ ಮಾಡುತ್ತಿದ್ದಾರೆ. ಮಧ್ಯಾಹ್ನ 12 ವೇಳೆಗೆ ಕೂಡ ಮತಗಟ್ಟೆಯಲ್ಲಿ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು.
ಬೆಳಿಗ್ಗೆ ಗಂಟೆ ಏಳಕ್ಕೆ ಮತದಾನ ಆರಂಭವಾಗಿದ್ದು,ಸುಮಾರು 11 ಗಂಟೆಯ ವೇಳೆಗೆ ಶೇ.33.7 ರಷ್ಟು ಮತದಾನವಾಗಿದೆ.
ಬೆಳಿಗ್ಗೆಯಿಂದಲೇ ಒಂದೇ ರೀತಿಯಲ್ಲಿ ಮತಗಟ್ಟೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತ ಮತಚಲಾಯಿಸುವ ದೃಶ್ಯ ಕಂಡು ಬಂದಿದೆ