ಬಂಟ್ವಾಳ: ಕಳೆದ ಆರು ದಿನಗಳ ಹಿಂದೆ ಕಾಣೆಯಾಗಿದ್ದ ಸರಕಾರಿ ಆದಿಕಾರಿಯೋರ್ವನ ಮೃತದೇಹ ಇಂದು ಸಂಜೆ ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ.
ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ಅಧಿಕಾರಿ ಲಕ್ಮೀನಾರಾಯಣ ಅವರು ಕರ್ತವ್ಯಕ್ಕೆ ಹಾಜರಾಗದೆ ಮನೆಗೂ ತೆರಳದೆ ಕಾಣೆಯಾಗಿರುವ ಬಗ್ಗೆ ಮಾ.27. ರಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಇವರು ಮಾ.27 ರಂದು ಬುಧವಾರ ಮಧ್ಯಾಹ್ನದ ಬಳಿಕ ಕಚೇರಿಯಿಂದ ತೆರಳಿದವರು ಪೋನ್ ಸ್ವಿಚ್ ಆಪ್ ಆಗಿತ್ತು.
ಮನೆಗೂ ಹೋಗದೆ ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾರೆ ಎಂದು ಈತನ ತಮ್ಮ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಚುನಾವಣೆಗೆ ಸಂಬಂಧಿಸಿದ ಎಸ್.ಎಸ್.ಟಿ.ತಂಡದಲ್ಲಿ ಇವರು ಕರ್ತವ್ಯ ನಿರ್ವಹಿಸಿತ್ತಿದ್ದು, ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಂಡದವರು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದರು.
ಕಳೆದ ಕೆಲ ಸಮಯಗಳ ಹಿಂದೆ ಕೂಡ ಇದೇ ರೀತಿ ಕಾಣೆಯಾಗಿದ್ದ ಲಕ್ಮೀನಾರಾಯಣ ಅವರನ್ನು ಪೋಲೀಸರು ಪತ್ತೆ ಹಚ್ಚಿದ್ದರು.
ಇವರ ಬೈಕ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ಣು, ಲಕ್ಮೀನಾರಾಯಣ ಅವರಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದರು.
ನಿನ್ನೆ ಪೋಲೀಸರಿಗೆ ಪಟ್ರಮೆ ಸಮೀಪ ಮೊಬೈಲ್ ಲೋಕೇಸನ್ ಕಂಡು ಬಂದಿದ್ದು ಪೋಲೀಸರು ಹುಡುಕಾಡಿದ್ದರು.
ಆದರೆ ಇಂದು ಈತನ ಮೃತದೇಹವನ್ನು ಸ್ಥಳೀಯ ಶೌರ್ಯ ತಂಡದವರು ನದಿಯಿಂದ ಮೇಲಕ್ಕೆತ್ತಿದ್ದಾರೆ.