Thursday, April 11, 2024

ಪಾಣೆಮಂಗಳೂರು ಉಕ್ಕಿನ ಸೇತುವೆಯ ಸಂರಕ್ಷಣೆಗೆ ಪುರಸಭೆ ಇಲಾಖೆಯಿಂದ ಎರಡನೇ ಬಾರಿಗೆ ಪ್ರಯತ್ನ: ಘನಗಾತ್ರದ ಕಬ್ಬಿಣದ ಕಂಬಗಳನ್ನು ಹಾಕಿ ಘನಗಾತ್ರದ ವಾಹನಗಳ ಸಂಚಾರಕ್ಕೆ ತಡೆ…

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಘಟನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಬೃಹತ್ ಪ್ರಮಾಣದ ತೂಕವನ್ನು ಹೊಂದಿರುವ ಕಬ್ಬಿಣದ ಕಂಬಗಳನ್ನು ಅಳವಡಿಸುವ ಕಾರ್ಯವನ್ನು ಪುರಸಭಾ ಇಲಾಖೆ ಕೈಗೊಂಡಿದ್ದು,ಕಾಮಗಾರಿ ಆರಂಭವಾಗಿದೆ.

ಇಲ್ಲಿನ ನೇತ್ರಾವತಿ ನದಿಗೆ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಉಕ್ಕಿನಿಂದ ನಿರ್ಮಾಣವಾದ ಪಾಣೆಮಂಗಳೂರು ಹಳೆಯ ಸೇತುವೆಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪುರಸಭೆ ಇಲಾಖೆ ಉತ್ತಮ ಕಾರ್ಯ ಕೈಗೊಂಡಿದೆ.

ಉಕ್ಕಿನ‌ ಸೇತುವೆಯಲ್ಲಿ ಸುಮಾರು ವರ್ಷಗಳ ಹಿಂದೆ ಬಿರುಕು ಕಂಡ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತಡೆಯನ್ನು ಒಡ್ಡಿದ್ದರು.
ಸೇತುವೆ ಮುರಿದು ಬೀಳುವ ಸಾಧ್ಯತೆಗಳಿವೆ ಎಂದು ಅದೇ ಸಮಯದಲ್ಲಿ ಹೊಸ ಸೇತುವೆಯ ನಿರ್ಮಾಣವಾಗಿದೆ.

ಅ ಬಳಿಕ ಸೇತುವೆಯ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಯಿತಾದರೂ ಘನ ಗಾತ್ರದ ವಾಹನಗಳಿಗೆ ನಿಷೇಧ ಮಾಡಲಾಗಿತ್ತು.
ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಾಗಿ ಅದೇಶ ಹೊರಡಿಸಿ, ಘನ ವಾಹನ ಸಂಚಾರ ನಿಷೇಧ ಹೇರಿ , ಸೇತುವೆಯ ಎರಡು ಭಾಗದಲ್ಲಿ ಸೂಚನ ಫಲಕ ಅಳವಡಿಸಿತ್ತು. ಆದರೆ ಸೂಚನಾಫಲಕದ ಅದೇಶ ಫಲಕಕ್ಕೆ ಮಾತ್ರ ಸೀಮಿತವಾಗಿ ಉಳಿದಿತ್ತು.

ನಿರಂತರವಾಗಿ ಈ ಸೇತುವೆಯ ಮೂಲಕ ಘನಗಾತ್ರದ ವಾಹನಗಳು ಸಂಚಾರವಾಗುತ್ತಿತ್ತು. ಇದೀಗ ಮಳೆಗಾಲದಲ್ಲಿ ಮತ್ತೆ ಸೇತುವೆ ಮಧ್ಯಭಾಗದಲ್ಲಿ ಬಿರುಕು ಕಂಡಿದ್ದು,ಮುಲಾರಪಟ್ನ ಸೇತುವೆಯ ತರಹ ಈ ಸೇತುವೆ ಮುರಿದು ಬೀಳುವ ಸಾಧ್ಯತೆಗಳಿವೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರು ವೈರಲ್ ಮಾಡಿದ್ದರು.

ವಿಡಿಯೋ ವೈರಲ್ ಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಲಾಖೆ ಎರಡು ಬದಿಯಲ್ಲಿ ಬ್ಯಾನರ್ ಅಳವಡಿಸಿ, ಘನವಾಹನ ಸಂಚಾರಕ್ಕೆ ನಿಷೇಧ ಸೂಚನೆಯನ್ನು ಅ ಮೂಲಕ ನೀಡಲಾಗಿತ್ತು. ಆದರೆ ವಾಹನ ಸವಾರರು ಮತ್ತೆ ಪುರಸಭೆಯ ಅದೇಶಕ್ಕೆ ಕಿಮ್ಮಿತ್ತಿನ ಬೆಲೆ ನೀಡದೆ ಸಂಚಾರ ನಿರಂತರವಾಗಿತ್ತು.

ಸೂಚನ ಫಲಕ ಫಲ ನೀಡದ ಹಿನ್ನೆಲೆಯಲ್ಲಿ ಇಲಾಖೆ ಸೇತುವೆಯ ಎರಡು ಬದಿಗೆ ಕಬ್ಬಿಣದ ಕಂಗಳನ್ನು ಹಾಕಿ ಅದರ ಮೇಲೆ ಅಡ್ಡವಾಗಿ ರಾಡ್ ಗಳನ್ನು ಅಳವಡಿಸಿ ಘನಗಾತ್ರದ ವಾಹನಗಳ ಸಂಚಾರಕ್ಕೆ ತಡೆಯನ್ನು ಮಾಡಿತ್ತು.

ಆದರೆ ಕಂಬಗಳನ್ನು ಅಳವಡಿಸಿ ಎರಡು ದಿನಗಳಾಗಬೇಕಾದರೆ ಲಾರಿಯೊಂದು ಸಂಚಾರಕ್ಕೆ ಮುಂದಾಗಿ ಕಬ್ಬಿಣದ ಕಂಬ ಮುರಿದು ಬಿದ್ದಿತ್ತು.
ಇಲಾಖೆ ಇದೀಗ ಕಿಂಟ್ಚಾಲ್ ಗಟ್ಟಲೆ ತೂಕದ ಕಂಬಗಳನ್ನು ಸೇತುವೆ ಎರಡು ಬದಿಗೆ ಹಾಕಿ ಘನ ಗಾತ್ರದ ವಾಹನಗಳು ಸಂಚಾರ ಮಾಡದಂತೆ ತಡೆ ಮಾಡಲು ಹೊರಟಿದ್ದು,ಕಾಮಗಾರಿ ಪ್ರಗತಿಯಲ್ಲಿದೆ.

ಮುಂದಿನ ಪೀಳಿಗೆಗೆ ಸ್ಮಾರಕ ವಾಗಿ ಉಕ್ಕಿನ ಸೇತುವೆ ಉಳಿಯಬೇಕಾದರೆ ಇಲಾಖೆ ಇಂತಹ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...