Monday, April 8, 2024

ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಶಾಸಕ ಹರೀಶ್‌ ಪೂಂಜಾ ನೇಮಕ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರನ್ನು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಿದ್ದಾರೆ.

ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪುತ್ರ ಉಮೇಶ್‌ ಕಾರಜೋಳ ಅವರನ್ನು ನಿಯುಕ್ತಿ ಮಾಡಲಾಗಿದೆ.

ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ:

ಮಹಿಳಾ ಮೋರ್ಚಾ: ಶಿಲ್ಪಾ ಟಿ.ಸುವರ್ಣ(ಉಡುಪಿ ಜಿಲ್ಲೆ) , ಡಾ.ಶೋಭಾ ಸಂಗನಗೌಡ(ಹಾವೇರಿ).

ಯುವ ಮೋರ್ಚಾ : ಹರೀಶ್‌ ಪೂಂಜಾ(ದಕ್ಷಿಣ ಕನ್ನಡ), ಸಂದೀಪ್‌ ರವಿ(ಬೆಂಗಳೂರು ದಕ್ಷಿಣ).

ಎಸ್‌ಟಿ ಮೋರ್ಚಾ : ಕೃಷ್ಣಾ ನಾಯಕ್‌(ಮೈಸೂರು), ಬಸವರಾಜ ಹುಂದ್ರಿ(ಚಿಕ್ಕೋಡಿ).

ಎಸ್‌ಸಿ ಮೋರ್ಚಾ : ಉಮೇಶ್‌ ಕಾರಜೋಳ (ಬಾಗಲಕೋಟೆ), ಮಹೇಂದ್ರ ಕೌತಾಳ(ಹುಬ್ಬಳ್ಳಿ-ಧಾರವಾಡ).

ಹಿಂದುಳಿದ ವರ್ಗಗಳ ಮೋರ್ಚಾ :ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ), ಸೋಮಶೇಖರ್‌(ಬೆಂಗಳೂರು ದಕ್ಷಿಣ).

ರೈತ ಮೋರ್ಚಾ : ಡಾ.ಬಿ.ಸಿ.ನವೀನ್‌ ಕುಮಾರ್‌(ಕೊಡಗು), ಕಲ್ಮರುಡಪ್ಪ(ಚಿಕ್ಕಮಗಳೂರು).

ಅಲ್ಪಸಂಖ್ಯಾತ ಮೋರ್ಚಾ : ಇಂದ್ರ ಕುಮಾರ್‌ (ಬೆಂ.ದಕ್ಷಿಣ), ರೌಫ‌ುದ್ದೀನ್‌ ಕಛೇರಿವಾಲೆ(ಬೀದರ್‌).

More from the blog

ಏಪ್ರಿಲ್ 14ರಂದು ಮಂಗಳೂರಿಗೆ ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಮಾವೇಶ ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಸ್ಥಳಾಂತರಗೊಂಡಿದ್ದು, ಅದರಂತೆ, ಏಪ್ರಿಲ್ 14 ರಂದು ದ.ಕ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮಾವೇಶ ನಡೆಯಲಿದೆ.. ಏಪ್ರಿಲ್ 14ಕ್ಕೆ ಬೆಂಗಳೂರಿಗೆ ಆಗಮಿಸಲಿರುವ...

ದ್ವಿತೀಯ ಪಿಯುಸಿ ಫಲಿತಾಂಶ ಶೀಘ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 3 ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಫಲಿತಾಂಶ ಪ್ರಕಟಗೊಂಡ ನಂತರ, ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು...

ಇಂದು ಸಂಪೂರ್ಣ ಸೂರ್ಯಗ್ರಹಣ : ಈ ರಾಶಿಯವರಿಗೆ ಕಾದಿದೆ ಆಪತ್ತು

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಮಾಹಿತಿಗಳ ಪ್ರಕಾರ ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...