Sunday, April 7, 2024

ಚಿರತೆ ದಾಳಿಗೆ ಕಡವೆ ಬಲಿ

ಬೆಳ್ತಂಗಡಿ: ನೆರಿಯದ ಬಯಲು ಮಲ್ಲ ಎಂಬಲ್ಲಿ ಚಿರತೆ ದಾಳಿ ನಡೆಸಿ ಕಡವೆಯನ್ನು ಬಲಿ ಪಡೆದಿರುವ ಘಟನೆ ನಡೆದಿದೆ.

ಸರಕಾರಿ ಅರಣ್ಯ ಪ್ರದೇಶದ ಬದಿಯಲ್ಲಿ ಸುಮಾರು 3 ವರ್ಷ ಪ್ರಾಯದ ಕಡವೆಯ ಕಳೇಬರ ಕಂಡು ಬಂದಿದ್ದು, ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಕಡವೆಯ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು, ಚಿರತೆ ದಾಳಿಯಿಂದ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆಯ ಡಿಆರ್‌ಎಫ್‌ಒಗಳಾದ ಅಧಿಕಾರಿ ಯತೀಂದ್ರ, ಭವಾನಿ ಶಂಕರ, ಪಾಂಡುರಂಗ ಕಮತಿ, ಸಿಬಂದಿ ಕಿಟ್ಟು ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಶು ಸಂಗೋಪನ ಇಲಾಖೆ ನೆರಿಯದ ವೈದ್ಯಾಧಿಕಾರಿ ಡಾ| ಯತೀಶ್‌ ಕುಮಾರ್‌ ಮರಣೋತ್ತರ ಪರೀಕ್ಷೆ ನಡೆಸಿದರು. ಕಕ್ಕಿಂಜೆಯ ಸ್ನೇಕ್‌ ಅನಿಲ್‌ ಸಹಕರಿಸಿದರು. ಬಳಿಕ ಕಡವೆಯ ಮೃತದೇಹವನ್ನು ದಹನ ಮಾಡಲಾಯಿತು.

 

More from the blog

ಹೆರಿಗೆ ವೇಳೆ ವಿಪರೀತ ರಕ್ತಸ್ರಾವ : ಲಾಯಿಲದ ಮಹಿಳೆ ಸಾವು

ಬೆಳ್ತಂಗಡಿ: ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ ಎಂಬವರು ಎರಡನೇ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಪದ್ಮನಾಭ ಸೇವಂತ ಅವರದು, ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಶಂಕೆ: ಪ್ರಕಾಶ್ ಶೆಟ್ಟಿ ತನಿಖೆಗೆ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ‌ ಸೇವಂತ ಎಂಬವರ ಸಾವಿನ ಸುತ್ತ ಅನುಮಾನಗಳು ವ್ಯಕ್ಯವಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಂಡು ಬಂದರೂ ಇದನ್ನು ವಿಮರ್ಶೆ ಮಾಡಿದರೆ ಇದೊಂದು ಕೊಲೆ...

ನಾಪತ್ತೆಯಾಗಿದ್ದ ಸರಕಾರಿ ಅಧಿಕಾರಿಯ ಮೃತದೇಹ ಪಟ್ರಮೆ ಸಮೀಪದ ನದಿಯಲ್ಲಿ ಪತ್ತೆ

ಬಂಟ್ವಾಳ: ಕಳೆದ ಆರು‌ ದಿನಗಳ‌ ಹಿಂದೆ ಕಾಣೆಯಾಗಿದ್ದ ಸರಕಾರಿ ಆದಿಕಾರಿಯೋರ್ವನ‌ ಮೃತದೇಹ ಇಂದು ಸಂಜೆ ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ. ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ಅಧಿಕಾರಿ ಲಕ್ಮೀನಾರಾಯಣ ಅವರು...