Saturday, April 6, 2024

ಬೈಕ್ ಸ್ಕಿಡ್ ಆಗಿ ಸವಾರ ಗಂಭೀರ

ಬಂಟ್ವಾಳ: ಸ್ಕಿಡ್ ಆಗಿ ಬೈಕ್ ಸವಾರನೋರ್ವ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜ.25 ರಂದು ರಾತ್ರಿ ಸುಮಾರು 10 ಗಂಟೆಗೆ ವೇಳೆಗೆ ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನಡೆದಿದೆ

ಬೈಕ್ ಸವಾರ ದಿಲೀಪ್ ಪುತ್ತೂರು ಎಂದು ಹೇಳಲಾಗಿದೆ.

ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಕಲ್ಲಡ್ಕ ಸಮೀಪ ದ ಕುದ್ರೆಬೆಟ್ಟು ಎಂಬಲ್ಲಿ ಅಪಘಾತ ಸಂಭವಿಸಿದೆ.
ಕಾಂಕ್ರೀಟ್ ರಸ್ತೆಯಲ್ಲಿ ರಾಶಿ ಬಿದ್ದಿರುವ ಮರಳು ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಅಸಮರ್ಪಕ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದೆ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಕುದ್ರೆಬೆಟ್ಟು ಎಂಬಲ್ಲಿ ರಸ್ತೆಯ ಡಿವೈಡರ್ ಪ್ರವೇಶ ಮಾಡುವ ಜಾಗದಲ್ಲಿ ಸೂಚನಫಲಕಗಳಿಲ್ಲ ಮತ್ತು ಕಾಂಕ್ರೀಟ್ ‌ಕಾಮಗಾರಿ ಮುಗಿದ ಭಾಗದ ರಸ್ತೆಯ ಮೇಲೆ ಮರಳು ತುಂಬಿಕೊಂಡಿರುವುದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯ ರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.

More from the blog

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಹೆರಿಗೆ ವೇಳೆ ವಿಪರೀತ ರಕ್ತಸ್ರಾವ : ಲಾಯಿಲದ ಮಹಿಳೆ ಸಾವು

ಬೆಳ್ತಂಗಡಿ: ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ ಎಂಬವರು ಎರಡನೇ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...