Saturday, April 6, 2024

ಬಡವರಿಗೆ ಸಿಗಬೇಕಾದ ಕೋಟ್ಯಾಂತರ ರೂ.ಮೌಲ್ಯದ ಪಡಿತರ ಅಕ್ಕಿ ಕಳವು ಮಾಡಿದ ಅಧಿಕಾರಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಿ, ಅಕ್ಕಿ ಕಳ್ಳತನದ ಜಾಲವನ್ನು ಪತ್ತೆ ಹಚ್ಚಿ: ತುಂಗಪ್ಪ ಬಂಗೇರ ಒತ್ತಾಯ

ಬಂಟ್ವಾಳ: ಸರಕಾರದಿಂದ ಬಿ.ಪಿ‌.ಎಲ್ ಕಾರ್ಡ್ ದಾರರಿಗೆ ನೀಡುವ ಕೋಟ್ಯಾಂತರ ರೂ ಮೌಲ್ಯದ ಸಾವಿರಾರು ಕಿಂಟ್ವಾಲ್ ಅಕ್ಕಿಯನ್ನು ತಲಪಾಡಿ ಪೊನ್ನೊಡಿ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಅಧಿಕಾರಿಗಳು ಕಳವು ಮಾಡಿದ್ದಾರೆ, ಅಕ್ಕಿ ಕಳ್ಳತನದ ಜಾಲವನ್ನು ಬೇಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯ ಮಾಡಿದ್ದಾರೆ.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಳಿಗೆಯಿಂದ 1.32 ಕೋಟಿ ಮೌಲ್ಯದ 3850 ಕಿಂಟ್ವಾಲ್ ಅಕ್ಕಿಯನ್ನು ಗೊಡೌನ್ ನಿಂದ ಕಳವು ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಅಗಸ್ಟ್ 17 ರಂದು ಗೊಡೌನ್ ನಿಂದ ಅಕ್ಕಿ ಕಳವು ನಡೆದಿರುವ ಬಗ್ಗೆ ಅಧಿಕಾರಿಗಳು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.

ಶಾಸಕರು ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಸರಕಾರ ಆಹಾರ ನಿರೀಕ್ಷಕರನ್ನು ಅಮಾನತು ಮಾಡಿ ಕೈ ತೊಳೆದುಕೊಂಡಿದೆ, ಇದು ಸರಿಯಾದ ಕ್ರಮವಲ್ಲ, ಈ ಗೋದಾಮಿನಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಬಂಧಿಸಿ ಅಕ್ಕಿ ಕಳ್ಳತನದ ಜಾಲವನ್ನು ಬಯಲಿಗೆ ಎಳೆಯಬೇಕು ಎಂದು ಅವರು ಒತ್ತಾಯ ಮಾಡಿದರು.

ಬಡಸಾಮಾನ್ಯರ ಪಡಿತರ ಅಕ್ಕಿಯನ್ನು ಜನರಿಗೆ ನೀಡದೆ ಕಸಿದು ಕಳ್ಳತನದ ಮೂಲಕ ವ್ಯವಹಾರ ಮಾಡುವ ಗ್ಯಾಂಗ್ ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ.

ಈ ಹಿಂದೆ ಗೊಡೌನ್ ನಿಂದ ಎಷ್ಟು ಕಳವಾಗಿದೆ, ಮತ್ತು ಇದೇ ರೀತಿಯಲ್ಲಿ ಇತರ ತಾಲೂಕಿನಲ್ಲಿ ಕೂಡ ಕಳ್ಳತನ ನಡೆದಿರಬಹುದು ಎಂಬ ಸಂಶಯವಿದ್ದು,

ಹಾಗಾಗಿ ಸಂಬಂಧಿಸಿದ ಆಹಾರ ಸಚಿವರು ಕೂಡಲೇ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ತೆಗೆದು ಕೊಳ್ಳಬೇಕು. ಒಂದು ವೇಳೆ ಜಿಲ್ಲಾಡಳಿತ, ಮತ್ತು ಸರಕಾರ ಕಳ್ಳರ ಜೊತೆ ಸೇರಿಕೊಂಡು ಪ್ರಕರಣವನ್ನು ಮುಚ್ಚಿ ಹಾಕಿದರೆ ತಾಲೂಕು‌ ಕಚೇರಿ ಮುಂಭಾಗದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

More from the blog

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಮುಖರ ಮನೆಗೆ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ: ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ, ವಿಕಸಿತ ಭಾರತದ ಸಂಕಲ್ಪಕ್ಕೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಬೇಕಾಗಿದೆ ಎಂದು ಮಂಗಳೂರು ಲೋಕಸಭಾ ಅಭ್ಯರ್ಥಿ ಬ್ರಿಜೇಶ್...

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಇಬ್ಬರು ಗಂಭೀರ

ಬಂಟ್ವಾಳ: ಮುಂಜಾನೆ ವೇಳೆ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಕೈಕಂಬ ಎಂಬಲ್ಲಿ ಬೈಕ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಹಾಗೂ ಸಹಸವಾರ ಇಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...