Thursday, April 18, 2024

ಕೇರಳ ಗಡಿಭಾಗ ತಲಪಾಡಿಯಲ್ಲಿ ಅಂತರಾಜ್ಯ ಸ್ಪಿರಿಟ್ ಮಾರಾಟ ದಂಧೆ ಪತ್ತೆ ಮೂವರು ವಶಕ್ಕೆ, ಓರ್ವ ಪರಾರಿ, ಲಕ್ಷಾಂತರ ಬೆಲೆಬಾಳುವ 2,240 ಲೀ. ಸ್ಪಿರಿಟ್, ಕಾರು, ನಕಲಿ ಸಾರಾಯಿ ವಶಕ್ಕೆ

ಉಳ್ಳಾಲ: ಗಡಿಭಾಗ ತಲಪಾಡಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ದಾಸ್ತಾನಿರಿಸಿ ಕರ್ನಾಟಕದಿಂದ ಕೇರಳ ಭಾಗಕ್ಕೆ ಸಾಗಾಟ ನಡೆಸುತ್ತಿದ್ದ ಬೃಹತ್ ಸ್ಪಿರಿಟ್, ನಕಲಿ ಸಾರಾಯಿ ಜಾಲವನ್ನು ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಟಿ.ಎಂ ಶ್ರೀನಿವಾಸ್ ನೇತೃತ್ವದ ಅಬಕಾರಿ ತಂಡ ಬೇಧಿಸಿದ್ದು, ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದುಕೊಂಡಿದೆ. ಓರ್ವ ಪರಾರಿಯಾಗಿದ್ದಾನೆ.

ಕಿನ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಂತ್ಯ ಎಂಬಲ್ಲಿನ ಮನೆಯಿಂದ 2240 ಲೀ ಮದ್ಯ ಸಾರ, 222ಲೀ ನಕಲಿ ಬ್ರ‍್ಯಾಂಡಿ ಹಾಗೂ ನಕಲಿ ಸಾರಾಯಿ ಪ್ಯಾಕಿಂಗ್ ನಡೆಸುತ್ತಿದ್ದ ಯಂತ್ರ ಹಾಗೂ ತಲಪಾಡಿ ಮಸೀದಿ ಬಳಿ ಮನೆಯೊಂದರಿಂದ 210 ಲೀ. ಸ್ಪಿರಿಟ್ 20ಲೀ. ನಕಲಿ ಬ್ರ‍್ಯಾಂಡಿ, 2.34 ಲೀ ನಕಲಿ ಪ್ರೆಸ್ಟೀಜ್ ವಿಸ್ಕಿ, ಇನೋವಾ ಕಾರು ಸಹಿತ ಅದರೊಳಗಿದ್ದ 70 ಲೀ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ.

ತಲಪಾಡಿ ಮಸೀದಿ ಬಳಿಯ ಸತೀಶ್ ತಲಪಾಡಿ, ಕುಂಜತ್ತೂರಿನ ನಿವಾಸಿಗಳಾದ ನೌಷಾದ್ ಹಾಗೂ ಅನ್ಸೀಫ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಸಾಂತ್ಯ ಮನೆಗೆ ನಡೆದ ದಾಳಿ ಸಂದರ್ಭ ಆರೋಪಿ ನಿತ್ಯಾನಂದ ಭಂಡಾರಿ ಪರಾರಿಯಾಗಿದ್ದಾನೆ. ದಾಳಿ ನಡೆದ ಮನೆಯಿಂದ ಕೇರಳದ ರಾ.ಹೆ.ಯನ್ನು ಒಳಮಾರ್ಗವಾಗಿ ಸೇರಲು ಕೇವಲ 1.5 ಕಿ.ಮೀ ಇದ್ದು, ಇದೇ ದಾರಿಯಾಗಿ ಹಲವು ವರ್ಷಗಳಿಂದ ದಂಧೆ ನಡೆಯುತ್ತಿರುವ ಶಂಕೆಯನ್ನು ಅಬಕಾರಿ ತಂಡ ವ್ಯಕ್ತಪಡಿಸಿದೆ. ಪ್ರಕರಣ ಸಂಬAಧ ಆರೋಪಿಯ ಬಂಧನವಾದ ತಕ್ಷಣವೇ ಇಡೀ ಜಾಲವನ್ನು ಪತ್ತೆಹಚ್ಚಲಾಗುವುದು, ಸ್ಪಿರಿಟ್ ತರುವ ಮೂಲ ಹಾಗೂ ಸಾಗಾಟ ನಡೆಸುವ ಸ್ಥಳಗಳನ್ನು ಪತ್ತೆಹಚ್ಚಿ ಎಲ್ಲರನ್ನು ಬಂಧಿಸುವ ವಿಶ್ವಾಸವನ್ನು ತಂಡ ವ್ಯಕ್ತಪಡಿಸಿದೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ತಡರಾತ್ರಿ 9 ಗಂಟೆಗೆ ತಲಪಾಡಿ ಸಾಂತ್ಯ ಎಂಬಲ್ಲಿರುವ ನಿತ್ಯಾನಂದ ಭಂಡಾರಿ ಮನೆಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿ ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ. ಮನೆಯನ್ನು ತಪಾಸಣೆ ನಡೆಸಿದ ತಂಡಕ್ಕೆ 60ಕ್ಕೂ ಅಧಿಕ ಕ್ಯಾನುಗಳಲ್ಲಿ ಸ್ಪಿರಿಟ್ ದಾಸ್ತಾನಿರಿಸಿರುವುದು ಪತ್ತೆಯಾಗಿದೆ. ಜೊತೆಗೆ 2022ರ ಅವಧಿ ಪೂರ್ಣಗೊಂಡ ಬಾಟಲಿಗಳಲ್ಲಿ ನಕಲಿ ಸಾರಾಯಿ, ಪಾಸ್ಟಿಕ್ ಪ್ಯಾಕೇಟ್ ಗಳಲ್ಲಿ ಹೆಸರನ್ನಿಟ್ಟಿರುವ ಬ್ರ‍್ಯಾಂಡಿ ಪ್ಯಾಕೆಟ್‌ಗಳು ಪತ್ತೆಯಾಗಿವೆ.

ಲಾಭಿ ಮಾಡಲು ಬಂದವನಿಂದ ಮತ್ತೊಂದು ಜಾಲ ಪತ್ತೆ !

ನಿತ್ಯಾನಂದ ಭಂಡಾರಿ ಮನೆಗೆ ದಾಳಿ ನಡೆಯುತ್ತಿದ್ದಂತೆ ವಿಷಯ ತಿಳಿದು ಸ್ಥಳಕ್ಕೆ ತಲಪಾಡಿ ಮಸೀದಿ ಬಳಿಯ ವ್ಯಕ್ತಿಯೋರ್ವ ಬಂದಿದ್ದಾನೆ. ಅಲ್ಲದೆ ಅಬಕಾರಿ ತಂಡದ ಜೊತೆಗೆ ಪ್ರಕರಣ ದಾಖಲಾಗದಂತೆ ಲಾಭಿಗೆ ಇಳಿದು ಮಾತಿಗೆ ಇಳಿದಿದ್ದಾನೆ. ಈತನನ್ನು ಅಬಕಾರಿ ತಂಡ ಹಿಡಿದು ವಿಚಾರಣೆ ನಡೆಸಿದಾಗ ಆತನ ಮನೆಯಲ್ಲಿಯೂ ದಂಧೆ ನಡೆಯುವುದು ಬೆಳಕಿಗೆ ಬಂದಿದೆ. ತಕ್ಷಣ 30 ನಿಮಿಷಗಳ ಅಂತರದಲ್ಲಿ ಅಬಕಾರಿಯ ಇಡೀ ತಂಡ ತಲಪಾಡಿ ಮಸೀದಿ ಬಳಿಯ ಸತೀಶ್ ತಲಪಾಡಿ ಮನೆಗೆ ದಾಳಿಯನ್ನು ನಡೆಸಿದೆ. ಈ ಸಂದರ್ಭ ಅಲ್ಲಿಯೂ ಲೀಟರ್ ಗಟ್ಟಲೆ ಸ್ಪಿರಿಟ್ ಹಾಗೂ ಸಾಗಾಟಕ್ಕೆ ಅನುವಾಗಿದ್ದ ಇನೋವಾ ಕಾರು ಹಾಗೂ ಮುಂದೆ ಪ್ಯಾಕಿಂಗ್ ಗೆಂದು ದಾಸ್ತಾನಿರಿಸಿದ್ದ ಪ್ಲಾಸ್ಟಿಕ್ ಕ್ಯಾನುಗಳನ್ನು ವಶಕ್ಕೆ ಪಡೆದು, ಮನೆಯಲ್ಲಿದ್ದ ಸತೀಶ್ ತಲಪಾಡಿ ಜತೆಗೆ ಸಹಚರರಾದ ನೌಷಾದ್, ಅನ್ಸೀಫ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಡರಾತ್ರಿಯವರೆಗೂ ಅಬಕಾರಿ ತಂಡ ತಪಾಸಣೆ ಮುಂದುವರಿಸಿದೆ.

ಮಂಗಳೂರು ವಿಭಾಗದ ಅಬಕಾರಿ ಇಲಾಖೆಯ ಉಪಅಧೀಕ್ಷಕ ಸೈಯ್ಯದ್ ತಫ್ಜೀಲುಲ್ಲಾ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಮಂಗಳೂರು ವಿಭಾಗದ ಜಂಟಿ ಆಯುಕ್ತೆ ನಾಗರಾಜಪ್ಪ ಟಿ., ದಕ್ಷಿಣ ವಲಯ-2 ಅಬಕಾರಿ ಇಲಾಖೆ ನಿರೀಕ್ಷಕಿ ಕಮಲಾ ಹೆಚ್.ಎನ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

More from the blog

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ; ರಾಮಲಲ್ಲಾ ಹಣೆ ಮೇಲೆ ಸೂರ್ಯ ತಿಲಕ

ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಮೊದಲ ರಾಮನವಮಿಯಂದು ರಾಮಲಲ್ಲಾನಿಗೆ ಸೂರ್ಯನ ತಿಲಕ ಸ್ಪರ್ಶಿಸಿದ್ದು, ಸೂರ್ಯವಂಶಸ್ಥನಿಗೆ ಸೂರ್ಯನ ಅಭಿಷೇಕ ನೆರವೇರಿಸಲಾಗಿದೆ. ರಾಮನವಮಿ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ...

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇವರು1942 ಆಗಸ್ಟ್ 19ರಂದು ಮೈಸೂರು...

ಹಿಂದೂ‌ ಸಂಘಟನೆಯ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಯುವಸೇನೆಯ ಮುಖಂಡನಾಗಿದ್ದು, ಉದ್ಯಮಿಯಾಗಿರುವ...

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ

ಮುಂಬೈ: ಬಾಲಿವುಡ್ ಆ್ಯಕ್ಟರ್​ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು 5 ಸುತ್ತು ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ...