Sunday, April 7, 2024

ಜ.21 ರಂದು ಪೆರಾಜೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ.) ವತಿಯಿಂದ 47 ನೇ ವರ್ಷದ ವಾರ್ಷಿಕ ಭಜನೆ ಹಾಗೂ 44ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಪೆರಾಜೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ.) ವತಿಯಿಂದ 47 ನೇ ವರ್ಷದ ವಾರ್ಷಿಕ ಭಜನೆ ಹಾಗೂ 44ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜ.21 ರಂದು ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಮಂಡಳಿ ಪ್ರಕಟನೆ ತಿಳಿಸಿದೆ.

47ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಸ್ಥಾಪಕ ಸದಸ್ಯರು ಶಾಂತಿಲ ಕೇಶವ ಗೌಡ ಅವರು ನೆರವೇರಿಸಲಿದ್ದಾರೆ.

ಸ್ಥಾಪಕ ಸದಸ್ಯರಾದ ನಾರಾಯಣ ಮೂಲ್ಯ ಮೈಂದಗುರಿ, ನಾರಾಯಣ ಪೂಜಾರಿ ನಡುಗುಡ್ಡೆ, ರಮೇಶ ನಾಯ್ಕ ಬೊಳ್ಳುಕಲ್ಲು, ಸುನೀತ್ ಕುಲಾಲ್ ಕೊಮ್ಮಕೋಡಿ ಅವರ ಗೌರವ ಉಪಸ್ಥಿತಿ ಇರಲಿದೆ.
ಸಂಜೆ 6.14ರ ಗೋಧೂಳಿ ಲಗ್ನದಲ್ಲಿ 44ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆ.

ಕಾರ್ಯಕ್ರಮಗಳ ವಿವರ

13-01-2024ನೇ ಶನಿವಾರ

ರಾತ್ರಿ ಗಂಟೆ 7-00ಕ್ಕೆ : ದೇವತಾ ಪ್ರಾರ್ಥನೆ, ನಗರ ಭಜನೆಯ ನಿಮಿತ್ತ ದೇವಸ್ಥಾನದಲ್ಲಿ ಭಜನೆ ಪ್ರಾರಂಭ (13-01-2024 ರಿಂದ 20-01-2024ರವರೆಗೆ ಪ್ರತಿದಿನ ರಾತ್ರಿ 7.00ರಿಂದ 7.30ರ ತನಕ ಭಜನಾ ಸೇವೆ ನಡೆಯುವುದು)

21-01-2024ನೇ ಅದಿತ್ಯವಾರ

ಬೆಳಿಗ್ಗೆ 5.30ರಿಂದ ಶ್ರೀ ಗಣೇಶ ಹವನ, ರಕ್ತೇಶ್ವರಿ ದೈವಕ್ಕೆ ತಂಬಿಲ, ಬೆಳಿಗ್ಗೆ 6.10 ಸೂರ್ಯೋದಯ ದೀಪೋಜ್ವಲನ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆರಾಜೆ ಇವರಿಂದ ಭಜನೆ ಸೇವೆ ಆರಂಭ ಬೆಳಿಗ್ಗೆ 6.10ರಿಂದ ಸಂಜೆ 6.14ರ ತನಕ ವಿವಿಧ ಭಜನಾ ಮಂಡಳಿಗಳಿಂದ ಹಾಗೂ ಗ್ರಾಮಸ್ಥರಿಂದ ಭಜನಾ ಸೇವೆಗಳು

ಮಧ್ಯಾಹ್ನ 12.30 : ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಮಧ್ಯಾಹ್ನ 1.00ರಿಂದ ಸಂಜೆ 6.14 : ಭಜನಾ ಸೇವೆಗಳು, ಮಹಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಸಂಜೆ 6.14 ಗೋಧೂಳಿ ಲಗ್ನ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ರಾತ್ರಿ 8.30 : ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ 8.45 : ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...