Sunday, April 21, 2024

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರಹಸ್ಯ ಬಯಲು ; ಧರ್ಮಸ್ಥಳಕ್ಕೂ ಬಂದಿದ್ದ ಶಾರೀಖ್

ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್​​ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಇದೀಗ ಸ್ಫೋಟದ ಆರೋಪಿ ಶಾರೀಖ್​ಗೆ ಬರುತ್ತಿದ್ದ ಹಣದ ಮೂಲ ಪತ್ತೆಯಾಗಿದೆ.

ತನಿಖೆ ವೇಳೆ ಬಹಿರಂಗವಾಗಿರುವ ಮಾಹಿತಿ ಪ್ರಕಾರ, ಶಾರೀಖ್​ನನ್ನು ಹ್ಯಾಂಡಲ್ ಮಾಡುತ್ತಿದ್ದ ಪಾಕಿಸ್ತಾನದ ಕರ್ನಲ್, MEXC ಕ್ರಿಪ್ಟೋ ವ್ಯಾಲೆಟ್‌ಗೆ ಹಣವನ್ನು ವರ್ಗಾಯಿಸುತ್ತಿದ್ದ. ಇದನ್ನು ಶಾರಿಕ್ ಭಾರತೀಯ ಕರೆನ್ಸಿಗೆ ಬದಲಾವಣೆ ಮಾಡಿಕೊಳ್ತಿದ್ದ. ಅದಕ್ಕಾಗಿ ಟೆಲಿಗ್ರಾಂನಲ್ಲಿರುವ ಕ್ರಿಪ್ಟೋ ವ್ಯವಹಾರ ಮಾಡುವವರ ನೆರವನ್ನು ಶಾರೀಖ್ ಪಡೆದುಕೊಳ್ತಿದ್ದ ಎನ್ನಲಾಗಿದೆ

ಮೈಸೂರಲ್ಲಿರುವ ಕ್ರಿಪ್ಟೋ ಕರೆನ್ಸಿ ಏಜೆಂಟ್‌ಗಳ ಜೊತೆಗೆ ಶಾರೀಖ್ ಸಂಪರ್ಕ ಇಟ್ಟುಕೊಂಡಿದ್ದಾನೆ. ಇದೇ ಏಜೆಂಟ್‌ಗಳು ಶಾರೀಖ್​​ಗೆ ನಗದು ಹಣವನ್ನು ನೀಡುತ್ತಿದ್ದರು. ಏಜೆಂಟ್‌ಗಳಿಗೆ ಕಮೀಷನ್ ರೂಪದಲ್ಲಿ ಶಾರೀಖ್​​ ಹಣ ನೀಡುತ್ತಿದ್ದ.

ಮೈಸೂರಿನಿಂದ 2022 ಸೆಪ್ಟೆಂಬರ್ 10ರಂದು ಮಂಗಳೂರಿಗೆ ಬಂದಿದ್ದ ಶಾರೀಖ್ ಅಲ್ಲಿರುವ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿದ್ದ.ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಕಟೀಲು ದೇವಸ್ಥಾನ, ಪಂಪ್‌ವೆಲ್ ಜಂಕ್ಷನ್​ ನೋಡಿಕೊಂಡು ಬಂದಿದ್ದಾನೆ. ಮಧ್ಯಾಹ್ನದ ಬಳಿಕ ಬಿ.ಸಿ ರೋಡ್‌ನಿಂದ ಬಸ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೂ ಹೋಗಿದ್ದ.

ಅರ್ಧ ದಿನ ಧರ್ಮಸ್ಥಳದಲ್ಲಿ ಓಡಾಡಿದ್ದ ಶಾರಿಖ್ ಸಂಜೆ ಆಗ್ತಿದ್ದಂತೆ ಚಿಕ್ಕಮಗಳೂರಿಗೆ ಹೋಗಿದ್ದಾನೆ. ಚಿಕ್ಕಮಗಳೂರಿನ ಎಂಜಿ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ರಾತ್ರಿ ತಂಗಿದ್ದಾನೆ. ಸೆಪ್ಟೆಂಬರ್ 11ರಂದು ಅಲ್ಲಿರುವ ದೇವೀರಮ್ಮ ಬೆಟ್ಟ ಮತ್ತು ಬಾಬಾ ಬುಡನ್‌ಗಿರಿಗೆ ಹೋಗಿ ಬಂದಿದ್ದು, ಅಲ್ಲಿಂದ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದ ಎನ್ನಲಾಗಿದೆ.

ಮೈಸೂರಲ್ಲಿ ನವೆಂಬರ್ 18 ರಂದು ಬಾಂಬ್ ತಯಾರಿಸಲು ಶುರುಮಾಡಿದ್ದಾನೆ. ಪ್ರೆಶರ್ ಕುಕ್ಕರ್ ಮೂಲಕ IED ಬಾಂಬ್ ತಯಾರಿಕೆಗೆ ಸಿದ್ಧತೆ ಆರಂಭಿಸಿದ್ದ. ಆರಂಭದಲ್ಲಿ 2.5 ಲೀಟರ್ ಸಾಮರ್ಥ್ಯದ ಕುಕ್ಕರ್‌ ಬಳಸಿದ್ದ. ಇದರಿಂದ ಜಾಸ್ತಿ ಹಾನಿ ಆಗಲ್ಲ ಎಂದು ಪ್ಲಾನ್ ಚೇಂಜ್ ಮಾಡಿದ ಬಳಿಕ 5 ಲೀಟರ್ ಸಾಮರ್ಥ್ಯದ ಕುಕ್ಕರ್ ತಂದಿಟ್ಟಿದ್ದ ಶಾರೀಖ್, ನವೆಂಬರ್ 18 ರಿಂದ ರಾತ್ರಿ 19ರವರೆಗೆ ಅದೇ ಕೆಲಸ ಮಾಡಿದ್ದಾನೆ.

ಕುಕ್ಕರ್ ಬಾಂಬ್ ಅಸೆಂಬಲ್ ಮಾಡುವಾಗ ಕೈಯಲ್ಲಿ ಕುಕ್ಕರ್ ಬಾಂಬ್ ಹಿಡಿದು ವಿಡಿಯೋ, ಫೋಟೋ ತೆಗೆದುಕೊಂಡಿದ್ದ. ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ISIS ಮಾದರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ವಿಡಿಯೋ ಮಾಡುವಾಗ ಹ್ಯಾಂಡ್ಲರ್ ಕರ್ನಲ್ ಹೆಸರು ಸಹ ಹೇಳಿದ್ದ ಎಂದು ತಿಳಿದುಬಂದಿದೆ.

More from the blog

ಕಾಂಗ್ರೇಸ್ ಸರಕಾರದ ಆಡಳಿತದಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಒಟ್ಟು 28 ಸ್ಥಾನದಲ್ಲಿದಲ್ಲಿ ಗೆಲುವು ಸಾಧಿಸುವುದು ನಿಶ್ವಿತ,ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಅವರು ಬಿಸಿರೋಡಿನ ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು...

ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದ ಆ್ಯಸಿಡ್ ದಾಳಿ ಸಂತ್ರಸ್ಥೆ ವಿದ್ಯಾರ್ಥಿನಿ

ಕಡಬ: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 4ರಂದು ಕಾಲೇಜಿನಲ್ಲಿ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಅಬಿನ್...

ಏಪ್ರಿಲ್ 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 25 ಮತ್ತು 26ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಏ.25ರ ಸಂಜೆ 6ರಿಂದ 26ರ ರಾತ್ರಿ 8ರ...

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...