Thursday, April 11, 2024

ಡಾ.ರವಿಕಕ್ಕೆಪದವು ಸೇವಾ ಟ್ರಸ್ಟ್ ವತಿಯಿಂದ ಕುಕ್ಕೆ ದೇವಳಕ್ಕೆ ಹೊರ ಕಾಣಿಕೆ ಅರ್ಪಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಸಷ್ಟಿ ಜಾತ್ರೋತ್ಸವದ ಅಂಗವಾಗಿ ಡಾl ರವಿ ಕಕ್ಕೆ ಪದವು ಸೇವಾ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಕ್ಕಿ ತೆಂಗಿನಕಾಯಿ, ಬಾಳೆಗೊನೆ ಸಿಯಾಳ ಹಿಂಗಾರ ಅಡಿಕೆಗೊನೆ ಮುಂತಾದವುಗಳನ್ನು ಹಸಿರು ಕಾಣಿಕೆಯಲ್ಲಿ ತರಲಾಯಿತು.

ಶ್ರೀ ದೇವಳದ ಪರವಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಕಾರ್ಯನಿರ್ವಹಣಾಧಿಕಾರಿ ಡಾ ನಿಂಗಯ್ಯ ಹಸಿರು ಕಾಣಿಕೆಗಳನ್ನ ಸ್ವೀಕರಿಸಿ ಫೆಬ್ರವರಿಯಲ್ಲಿ ನಡೆಯುವ ರಾಜ್ಯಮಟ್ಟದ ಅರ್ಜುನ್ ಕಬಡ್ಡಿ ಕರಪತ್ರಗಳನ್ನು ಬಿಡುಗಡೆಗೊಳಿಸಿದ್ದರು.

ಈ ಸಂದರ್ಭದಲ್ಲಿ ಹರೀಶ ಹಿಂಜಾಡಿ, ಶ್ರೀ ವತ್ಸ ,ಸುಬ್ರಹ್ಮಣ್ಯ ಭಟ್, ಸುರೇಶ್ ಭಟ್ ,ಯಜ್ಞೇಶ ಆಚಾರ್, ಸೋಮಶೇಖರ ನಾಯಕ್,ಬಿ. ಎಂ ಎಸ್ ಆಟೋ ಮಾಲಕ ಸಂಘದ ಅಧ್ಯಕ್ಷರು ದಿನೇಶ್,ಜನಾರ್ಧನ ,ಸತೀಶ್ ಕೂಜುಗೋಡು ಬೆಳ್ಳಿ ಕುಕ್ಕೆ,ರವಿ ಕಕ್ಕೆ ಪದವು ಸೇವಾ ಟ್ರಸ್ಟ್ ನ ಸುಮಾರು 60 ಸ್ವಯಂಸೇವಕರು ,ಡಾl ರವಿಕಕ್ಕೆ ಪದವು ಅವರ ಪತ್ನಿ ಶ್ರೀಮತಿ ಗೀತಾ ರವಿ ಕಕ್ಕೆ ಪದವು ಪುತ್ರರಾದ ಕಾರ್ತಿಕ್, ಗಣೇಶ್, ಸುಬ್ರಮಣ್ಯ, ಪುತ್ರಿ ಅಮೃತ ಹಾಗೂ ಸೇವಾ ಟ್ರಸ್ಟ್ ನ ಪುಷ್ಪ ಕೃಷ್ಣಮೂರ್ತಿ, ಚಂದ್ರಕಲಾ, ಜಯಶ್ರೀ ,ಮಣಿಕಂಠ ,ಸೌಮ್ಯ, ಮುಂತಾದರು ಉಪಸ್ಥಿತರಿದ್ದರು.

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಪದ್ಮನಾಭ ಸೇವಂತ ಅವರದು, ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಶಂಕೆ: ಪ್ರಕಾಶ್ ಶೆಟ್ಟಿ ತನಿಖೆಗೆ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ‌ ಸೇವಂತ ಎಂಬವರ ಸಾವಿನ ಸುತ್ತ ಅನುಮಾನಗಳು ವ್ಯಕ್ಯವಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಂಡು ಬಂದರೂ ಇದನ್ನು ವಿಮರ್ಶೆ ಮಾಡಿದರೆ ಇದೊಂದು ಕೊಲೆ...