Wednesday, April 10, 2024

ಲಾರಿಗಳು ಮುಖಾಮುಖಿ ಡಿಕ್ಕಿ, ಟ್ಯಾಂಕ್ ಸ್ಪೋಟಗೊಂಡು ರಸ್ತೆಗೆ ಚೆಲ್ಲಿದ ತೈಲ, ವಾಹನ ಸಂಚಾರಕ್ಕೆ ಅಡ್ಡಿ: ರಸ್ತೆಗೆ ನೀರು ಹಾಯಿಸಿ ಶುಚಿ ಮಾಡಿದ ಅಗ್ನಿಶಾಮಕ ದಳ…

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ನರಹರಿ ತಿರುವಿನಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಚಾಲಕ ಗಂಭೀರ ಗಾಯಗೊಂಡಿದ್ದಾರೆ, ಈ ಘಟನೆಯಿಂದ ಲಾರಿಗಳೆರಡರ ಆಯಿಲ್ ಟ್ಯಾಂಕ್ ಸ್ಪೋಟಗೊಂಡು ತೈಲ ರಸ್ತೆಯಲ್ಲಿ ಪೂರ್ತಿಯಾಗಿ ಚೆಲ್ಲಿದ್ದರಿಂದ ಹೆದ್ದಾರಿಯಲ್ಲಿ ತಾಸುಗಟ್ಟಲೆ ಸಂಚಾರ ಅಸ್ತವ್ಯಸ್ತಗೊಂಡಿತು.

ಮಂಗಳೂರಿನಿಂದ ಕಲ್ಲಿದ್ದಲನ್ನು ಹೇರಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಲಾರಿ ಹಾಗೂ ಎದುರಿನಿಂದ ಬರುತ್ತಿದ್ದ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಲಾರಿ ನರಹರಿ ಪರ್ವತದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿ, ಈ ಘಟನೆ ಸಂಭವಿಸಿದೆ.

ಲಾರಿಗಳೆರಡು ಡಿಕ್ಕಿ ಯಾದ ರಭಸಕ್ಕೆ ಓರ್ವ ಚಾಲಕ ಗಂಭೀರ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಲಾರಿಗಳೆರಡರ ತೈಲ ತುಂಬಿದ ಟ್ಯಾಂಕ್ ಸ್ಪೋಟಗೊಂಡು ತೈಲ ಪೂರ್ತಿ ರಸ್ತೆಯಲ್ಲಿ ಚೆಲ್ಲಿದ್ದು,ವಾಜನಗ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪರಿಣಾಮ ಒಂದು ಬದಿಯಿಂದ ಮೆಲ್ಕಾರ್ ವರೆಗೂ ಇನ್ನೊಂದು ಬದಿಯಿಂದ ಕಲ್ಲಡ್ಕವರೆಗೂ ವಾಹನಗಳು ಮುಂದೆ ಚಲಿಸಲಾಗದೆ ‌ಸರತಿ ಸಾಲಿನಲ್ಲಿ ನಿಂತ ದೃಶ್ಯ ‌ಕಂಡು ಬಂತು.

ಸುದ್ದಿ ತಿಳಿದ ಬಂಟ್ವಾಳ ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಟ್ರಾಫಿಕ್ ಎಸ್.ಐ.ಸುತೇಶ್ ಅವರು ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಸಿ ನೀರು ಹಾಯಿಸುವ ಮೂಲಕ ತೈಲವನ್ನು ಶುಚಿಗೊಳಿಸುವ ಕಾರ್ಯ ನಡೆಸಿದರು.

ಬಂಟ್ವಾಳ ಟ್ರಾಫಿಕ್ ಪೋಲೀಸರು ಸ್ಥಳದಲ್ಲಿದ್ದು ಸಹಕರಿಸಿದರು.

ತೈಲ ಶುಚಿಯಾದ ಬಳಿಕ ಅಪಘಾತಕ್ಕೊಳಗಾದ ಲಾರಿಗಳೆರಡನ್ನು ಕ್ರೇನ್ ಮೂಲಕ ಬದಿಗೆ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...

ಬಂಟ್ವಾಳ ತಾಲೂಕಿನಾದ್ಯಂತ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಬಂಟ್ವಾಳ ತಾಲೂಕಿನಾದ್ಯಂತ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ ನಡೆಯಿತು. ಬುಡೋಳಿ ಏನಾಜೆ ಬಿಲಾಲ್ ಮಸ್ಜಿದ್ ಏನಾಜೆ ಬುಡೋಳಿಯಲ್ಲಿ ಮಸೀದಿ ಖತೀಬರಾದ ಅಬ್ದುಲ್ ಮಜೀದ್ ದಾರಿಮೀ ಉಸ್ತಾದ್ ಜುಮ್ಮಾ ನೇತೃತ್ವ ವಹಿಸಿ ಈದ್ ಸಂದೇಶವನ್ನು...