Friday, April 5, 2024

ನ.24 ರಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ ನ.24 ರಂದು ಶುಕ್ರವಾರ ರಾತ್ರಿ 10ಗಂಟೆಗೆ ನಡೆಯಲಿದೆ.

ನ.23 ರಂದು ಸಂಜೆ 6.15ಕ್ಕೆ ಕೊಪ್ಪರಿಗೆ ಮುಹೂರ್ತ, 6. 30ಕ್ಕೆ ಶ್ರೀ ಕೃಷ್ಣಾ ಭಜನಾ ಮಂದಿರ ಪಣೋಲಿಬೈಲು ಇವರಿಂದ ಕುಣಿತ ಭಜನೆ, ಸಂಜೆ 7ಗಂಟೆಗೆ ದೀಪ ಪ್ರಜ್ವಲನೆ ನಡೆಯಲಿದೆ.

ಸಂಜೆ 7.05ರಿಂದ ಸಾತ್ವಿಕ ತೇಜ ಕಲಾಕೇಂದ್ರ (ರಿ.) ಒಡಿಯೂರು ಮತ್ತು ಪಣೋಲಿಬೈಲು ಶ್ರೀ ಕೃಷ್ಣ ಮಂದಿರ ಶಾಖೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು ಹಾಗೂ ರಾತ್ರಿ 8ಗಂಟೆಯಿಂದ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ಯಕ್ಷಗಾನ ವೈಭವ ಸ್ವರಾಭಿಷೇಕ ನಡೆಯಲಿದೆ.

ನ.24ರಂದು ಬೆಳಿಗ್ಗೆ ನವಕ ಕಲಶ ಪ್ರಧಾನ ಮತ್ತು 12 ತೆಂಗಿನಕಾಯಿ ಗಣಹೋಮ, 11ಗಂಟೆಯಿಂದ ನಾಗತಂಬಿಲ, 1. ಗಂಟೆಯಿಂದ ಸಾರ್ವಜನಿಕ ಅನ್ನಸಂರ್ಪಣೆ ಹಾಗೂ 2 ಗಂಟೆಯಿಂದ ಶ್ರೀ ಅಯ್ಯಪ್ಪ ಬಯಲಾಟ ಸೇವಾ ಸಮಿತಿ, ಪಣೋಲಿಬೈಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಅಪರಾಹ್ನ ಗಂಟೆ 3 ಗಂಟೆಯಿಂದ 4 ಗಂಟೆವರೆಗೆ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ, ಸುಭಾಷ್ ನಗರ, ಸಜೀಪಮೂಡ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 4 ಗಂಟೆಯಿಂದ 5ಗಂಟೆವರೆಗೆ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಭ ಭಜನಾ ಮಂಡಳಿ, ನಂದಾವರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 5ಗಂಟೆಯಿಂದ 6 ಗಂಟೆವರೆಗೆ ಶ್ರೀ ಬಾಲಕೃಷ್ಣ ಭಜನಾ ಮಂಡಳಿ, ಕುಂಪಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಜನೆ ಹಾಗೂ ರಾತ್ರಿ 7 ಗಂಟೆಯಿಂದ 8.30ರ ತನಕ ನೃತ್ಯ ಸುಧಾ ಮಂಗಳೂರು, ವಿದುಷಿ ಸೌಮ್ಯ ಸುಧೀಂದ್ರ ರಾವ್ ಇವರಿಂದ ಭರತನಾಟ್ಯ ಮತ್ತು ನೃತ್ಯ ವೈಭವ ಹಾಗೂ ರಾತ್ರಿ 8.30ರಿಂದ ಅವುದಾಲಾಪುಜಿ ನಾಟಕ ನಡೆಯಲಿದೆ.

ರಾತ್ರಿ ಭಂಡಾರದ ಮನೆಯಿಂದ ದೈವಗಳ ಭಂಡಾರ ಬರುವುದು ಬಳಿಕ 10 ಗಂಟೆಗೆ ವರ್ಷಾವಧಿ ಕೋಲೋತ್ಸವ ನಡೆಯಲಿದೆ.

 

 

More from the blog

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...