Wednesday, April 17, 2024

ಕಂಬಳ ಋತುವಿನ ಪ್ರಥಮ ಕಂಬಳಕೂಟ… ಮೈರ, ಬರ್ಕೆಜಾಲುನಲ್ಲಿ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

ಬಂಟ್ವಾಳ: ಕಂಬಳ ಋತುವಿನ ಮೊದಲ ಕಂಬಳ ಕೂಟ ಬಂಟ್ವಾಳ ತಾಲೂಕಿನ ಉಳಿಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಆಶ್ರಯದಲ್ಲಿ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಬೆಳಗ್ಗೆ ಅದ್ದೂರಿಯ ಚಾಲನೆ ನೀಡಲಾಯಿತು.

ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು ಅವರು ಧಾರ್ಮಿಕ ವಿಽ,ವಿಧಾನವನ್ನು ನೆರವೇರಿಸಿದರು. ಮಾಜಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಽಕಾರಿ ಜಗನ್ನಾಥ ಬಂಗೇರ ನಿರ್ಮಲ್ ನರಿಕೊಂಬು ಅವರು ಸತ್ಯ-ಧರ್ಮ ಜೋಡುಕರೆಯನ್ನು ಉದ್ಘಾಟಿಸಿದರು.

ಪ್ರಗತಿಪರ ಕೃಷಿಕ ಚಯಚಂದ್ರ ಬೊಳ್ಮಾರು ಅವರು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ ಅವರು ಸಭಾಧ್ಯಕ್ಷತೆ ವಹಿಸಿದ್ದರು.

ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ , ಜಿಲ್ಲಾ ಕಂಬಳ ಸಮಿತಿ ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಪ್ರಗತಿಪರ ಕೃಷಿಕ ಉಳಿ ದಾಮೋದರ ನಾಯಕ್,ಮುಂಬಯಿ ಉದ್ಯಮಿ ನಾರಾಯಣ ಶೆಟ್ಟಿ ಕಕ್ಯ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಡಾ. ರಾಜಾರಾಮ ಕೋಂಗುಜೆ, ಪ್ರಮುಖರಾದ ಸಂಜೀವ ಪೂಜಾರಿ ಕಟ್ಟದಡೆ, ಉಳಿ ಗ್ರಾ.ಪಂ.ಉಪಾಧ್ಯಕ್ಷ ವಸಂತ ಸಾಲ್ಯಾನ್ ರಾಮನಗರ, ಮಾಜಿ ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಸರಪಾಡಿ ಗ್ರಾ.ಪಂ.ಸದಸ್ಯ ಧನಂಜಯ ಶೆಟ್ಟಿ, ರವಿ ಶೆಟ್ಟಿ ಬೋಳ್ಯ. ಕೃಷ್ಣಪ್ಪ ಗೌಡ ಬರ್ಕೆಜಾಲು, ತನಿಯಪ್ಪ ಗೌಡ ಪೆಂರ್ಗಾಲು, ಮೋನಪ್ಪ ಸಾಲ್ಯಾನ್, ಪ್ರವೀಣ್ ಶೆಟ್ಟಿ ಕಿಂಜಾಲು, ನಾರಾಯಣ ಪೂಜಾರಿ ಬೊಳ್ಳುಕಲ್ಲು, ಸುಧಾಕರ ಶೆಟ್ಟಿ ಶಂಕರಬೆಟ್ಟು,ಗೋಪಾಲ ಶೆಟ್ಟಿ, ಜಗದೀಶ ಶೆಟ್ಟಿ ಬೋಳದಗುತ್ತು, ಲೋಕೇಶ್ ಶೆಟ್ಟಿ ಮುಚ್ಚೂರು, ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ತುಷಾರ್ ಭಂಡಾರಿ, ಲತೀಶ್ ಕುಕ್ಕಾಜೆ, ಪದಾಧಿಕಾರಿಗಳಾದ ಸುರೇಶ್ ಮೈರ, ಶಾಂತಪ್ಪ ಪೂಜಾರಿ ಹಟದಡ್ಕ, ಉಮೇಶ್ ಪೂಜಾರಿ, ಪುರುಷೋತ್ತಮ ಪೂಜಾರಿ ಪಲ್ಕೆ, ರಂಜಿತ್ ಮೈರಾ,ಕುಶಲ ಮೈರ, ರವೀಂದ್ರ ಅಡಪ ದಿಡಿಂಬಿಲ , ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಸುರೇಂದ್ರ ಪೂಜಾರಿ ಕಂಚಲಪಲ್ಕೆ, ವಸಂತ ಪೂಜಾರಿ ಡೆಚ್ಚಾರು, ಚೇತನ್ ಊರ್ದೊಟ್ಟು, ಸತೀಶ್ ಹೊಸ್ಮಾರು, ಪ್ರಕಾಶ್ ಕರ್ಲ, ಮೊದಲಾದವರಿದ್ದರು.

ಶಿವಾನಂದ ಮೈರಾ ಪ್ರಸ್ತಾವಿಸಿ, ಸ್ವಾಗತಿಸಿದರು.ಪ್ರಶಾಂತ್ ಮೈರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

More from the blog

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...

ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ : ಬಜರಂಗದಳ, ವಿ.ಹಿಂ.ಪರಿಷತ್ ಕಲ್ಲಡ್ಕ ಪ್ರಖಂಡದಿಂದ ಖಂಡನೆ

ಬಂಟ್ವಾಳ: ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ನಡೆಸಿದ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...