Tuesday, April 9, 2024

ದೀಪಾವಳಿಯಲ್ಲಿ ಪ್ರಜ್ವಲಿಸಿದ ಸೌಹಾರ್ದ ಸಂಭ್ರಮ

ದಕ್ಷಿಣಕನ್ನಡ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘದಿಂದ ಮಂಗಳೂರಿನ ಸಂಘದ ಕಚೇರಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಯನ್ನ ವಿಶಿಷ್ಟವಾಗಿ ಆಚರಿಸಲಾಯಿತು.

ಸಂಘದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದ ಸದಸ್ಯರು ಒಟ್ಟಾಗಿ ಹಿಂದೂ ಧರ್ಮದ ಸದಸ್ಯರನ್ನು ಆರತಿ ಬೆಳಗಿಸಿ ಸ್ವಾಗತಿಸಿ, ಎಲ್ಲರೂ ಒಟ್ಟಾಗಿ ದೀಪವನ್ನು ಬೆಳಗಿಸಿ, ಹಸಿರು ಪಟಾಕಿಯನ್ನು ಸಿಡಿಸಿ ದೀಪಾವಳಿ ಹಬ್ಬವನ್ನು ಸೌಹಾರ್ದತೆಯ, ಮಧುರತೆಯ, ಬಾಂಧವ್ಯದ ಸೊಬಗಿನೊಂದಿಗೆ ವಿನೂತನ ಶೈಲಿಯಲ್ಲಿ ಆಚರಿಸಲಾಯಿತು.

ಹಲವಾರು ಸಮಾಜಮುಖಿ ಕಾರ್ಯ ವೈಖರಿಯೊಂದಿಗೆ ಉತ್ಸಾಹಿ ಸದಸ್ಯರಿರುವ ಕೇವಲ ಒಂದೇ ವರ್ಷ ಹಿಂದೆ ನೂತನವಾಗಿ ಪ್ರಾರಂಭಗೊಂಡ ಈ ಸಂಘ ಈಗಾಗಲೇ ಕ್ರಿಕೆಟ್ ಪಂದ್ಯಾಟ, ಕಿರು ಪ್ರವಾಸ, ಸ್ವಾತಂತ್ರ್ಯೋತ್ಸವದ ಆಚರಣೆ, ಆಟಿಡೊಂಜಿ ದಿನ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದ್ದು ಈ ಬಾರಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು

ಕಾರ್ಯಕ್ರಮದಲ್ಲಿ ದೀಪಾವಳಿಯ ವೈಶಿಷ್ಟ್ಯದ ಬಗ್ಗೆ ಶ್ರೀಯುತ ಲಕ್ಷ್ಮೀನಾರಾಯಣ ರವರು ಹೇಳಿದರು, ಕ್ರಿಶ್ಚಿಯನ್ ಬಾಂಧವರ ಪರವಾಗಿ ವಿಲ್ಫ್ರೆಡ್ ರವರು ಶುಭಾಶಯ ಕೋರಿದರು. ಮುಸ್ಲಿಂ ಬಾಂಧವರ ಪರವಾಗಿ ಫಕೀರಬ್ಬರವರು ಸೌಹಾರ್ದತೆಯ ಮಧುರತೆಯನ್ನು ವಿವರಿಸಿದರು.

ಸಂಘದ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ ಹಾಗೂ ಕಾರ್ಯದರ್ಶಿ ಸುಲಕ್ಷಣ್ ರೈ ರವರು ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದರು.

ದೀಪಾವಳಿ ಹಬ್ಬವನ್ನು ಎಲ್ಲಾ ಬಾಂಧವರು ಅದ್ದೂರಿಯಾಗಿ ಆಚರಿಸಿ ದೀಪಾವಳಿಯ ಸಿಹಿಯೊಂದಿಗೆ ಸೌಹಾರ್ದತೆಯ ಸವಿಯನ್ನು ಹಂಚಿಕೊಂಡು ಸಂತಸ ಪಟ್ಟರು.

More from the blog

ಬಂಟ್ವಾಳದ ಕುದ್ಕೋಳಿ: ಹೊತ್ತಿ ಉರಿದ ಡಸ್ಟರ್ ಕಾರು

ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಇಂದು ಬೆಳಗ್ಗೆ (ಸೋಮವಾರ) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...