Saturday, April 20, 2024

ಬಂಟ್ವಾಳದಲ್ಲಿ ಬಿಜೆಪಿ ಮನೆಯಲ್ಲಿ ಮನಸ್ತಾಪ…. ನಳಿನ್ ಕುಮಾರ್ ಕಟೀಲು ಅಭಿನಂದನಾ ಸಭೆಗೆ ವಿರೋಧ… ಬಹಿರಂಗವಾಯಿತಾ ಬಿಜೆಪಿಯೊಳಗಿನ ಮುನಿಸು….

ಬಂಟ್ವಾಳ: ಬಂಟ್ವಾಳದಲ್ಲಿ ಇಂದು ನಡೆಯುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಅಭಿನಂದನಾ ಸಭೆಯ ಮುನ್ನವೇ ಆರ್.ಎಸ್.ಎಸ್.ಹಾಗೂ ಬಿಜೆಪಿ ನಡುವೆ ಭಿನ್ನಮತ ಸ್ಪೋಟಗೊಂಡಂತೆ ಕಂಡು ಬಂದಿದೆ.

‌ನಳಿನ್ ಕುಮಾರ್ ಕಟೀಲು ಅವರು ರಾಜ್ಯದ ಅಧ್ಯಕ್ಷ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ದ.ಕ.ಜಿಲ್ಲೆಯ ಬಂಟ್ವಾಳದಲ್ಲಿ ಬಿಜೆಪಿ ವತಿಯಿಂದ ಅಭಿನಂದನೆಯನ್ನು ಮಾಡಲು ಸಿದ್ದವಾಗುತ್ತಿದ್ದಂತೆ ಜಿಲ್ಲೆಯ ಹೈಕಮಾಂಡ್ ಕಲ್ಲಡ್ಕ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮುನಿಸಿಕೊಂಡಿದ್ದಾರೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ಬಂಟ್ವಾಳದಲ್ಲಿ ಬಿಜೆಪಿಯೊಳಗೆ ಬಣರಾಜಕೀಯ ಬಹಿರಂಗವಾಗಿದ್ದು,ಹಾದಿಬೀದಿಯಲ್ಲಿ ಕಾರ್ಯಕರ್ತರು ಮಾತನಾಡುವುದೇ ಇದಕ್ಕೆ ಸಾಕ್ಷಿಯಾಗಿದೆ.

ಬಿಜೆಪಿ ಪಾರ್ಟಿಯಲ್ಲಿ ಎಲ್ಲೂ ನಡೆಯದ, ಹಿಂದೆಂದೂ ಆಗದ ಕಾರ್ಯಕ್ರಮ ಬಂಟ್ವಾಳದಲ್ಲಿ ಯಾಕೆ ನಡೆಯಬೇಕು ಎಂಬುದು ಆರ್.ಎಸ್.ಎಸ್.ವಾದವಾದರೆ, ಕಾರ್ಯಕ್ರಮ ಮಾಡಿಯೇ ಸಿದ್ದ ಎಂಬ ಹಠಕ್ಕೆ ಬಿದ್ದ ಬಿಜೆಪಿ ವೇದಿಕೆ ಸಿದ್ದಪಡಿಸಿದೆ.

ರಾಜ್ಯದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ ಬಿ.ವೈ.ವಿಜಯೇಂದ್ರ ಅವರು ಅಧ್ಯಕ್ಷ ನಾದ ಬಳಿಕ ಮೊದಲ ಬಾರಿಗೆ ದ.ಕ.ಜಿಲ್ಲೆಗೆ ಆಗಮಿಸುವ ದಿನವೇ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

ಕಾರ್ಯಕರ್ತರಿಗೆ ಅಭಿನಂದನೆ ಮಾಡಲಿ

ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನೆ ಸಲ್ಲಿಸುವ ಬದಲು ಅವರನ್ನು ಮೂರು ಬಾರಿ ಗೆಲ್ಲಿಸಿ ಸಂಸತ್ ಗೆ ಕಳುಹಿಸಿದ ಕಾರಣಕ್ಕಾಗಿ ಜಿಲ್ಲೆಯ ಕಾರ್ಯಕರ್ತರನ್ನು, ಮತ ನೀಡಿದ ಮತದಾರರನ್ನು ಅವರು ಅಭಿನಂದಿಸಲಿ ಎಂದು ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪುತ್ತೂರಿನಲ್ಲಿ ಹಾಕಿದ ಬೆಂಕಿ ಇನ್ನೂ ನಂದಿಸಿಲ್ಲ, ಮತ್ತೆ ಬಂಟ್ವಾಳದಲ್ಲಿ ಬಿಜೆಪಿ ಯನ್ನು ತುಂಡುಮಾಡುವ ಕೆಲಸ ಆಗಬಾರದು ಎಂದು ಖಡಕ್ ಆಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಪುತ್ತೂರಿನಲ್ಲಿ ಆಗಿರುವ ಸಣ್ಣ ತಪ್ಪಿನಿಂದ ಕಾರ್ಯಕರ್ತರು ತಲವಾರು ಹಿಡಿಯುವ ಮಟ್ಟಕ್ಕೆ ತಲುಪಿತು. ಆದರೆ ಅಲ್ಲಿ ಬಿಜೆಪಿ ವಿರುದ್ದ ನಿಂತ ವ್ಯಕ್ತಿಯನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಿದ್ದಾರೆ ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸ್ವಂತ ಊರಿನ ಸಮಸ್ಯೆಯನ್ನು ರಾಜ್ಯಾದ್ಯಕ್ಷರಾಗಿದ್ದ ಸಂದರ್ಭದಲ್ಲಿ ಸರಿಪಡಿಸುವ ಕೆಲಸ ಮಾಡಬೇಕಿತ್ತು ಬಂಟ್ವಾಳದ ಪ್ರಮುಖರಿಗೆ ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸ್ಟೇಟ್ಸ್ ಡಿ.ಪಿ.ವಾರ್

ಬಂಟ್ವಾಳದ ಕಾರ್ಯಕರ್ತರೋರ್ವರು ಆರ್.ಎಸ್.ಎಸ್.ಪ್ರಮುಖರಾದ ಕಲ್ಕಡ್ಕ ಡಾ| ಪ್ರಭಾಕರ್ ಭಟ್ ಅವರ ಚಿತ್ರವನ್ನು ಹಾಕಿದ್ದರು. ಈ ವಿಚಾರದಲ್ಲಿ ಕಾರ್ಯಕರ್ತನನ್ನು ಪ್ರಮುಖರು ಪ್ರಶ್ನಿಸಿದ್ಧಾರೆ. ನಾನು ಆರಂಭದಲ್ಲಿ ಮೋದಿಯವರ ಭಾವಚಿತ್ರ,ಬಳಿಕ ಚುನಾವಣಾ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಚಿತ್ರವನ್ನು ಹಾಕಲಾಗಿತ್ತು. ಇದೀಗ ಭಟ್ ಅವರ ಚಿತ್ರವನ್ನು ಹಾಕಿದ್ದೇನೆ.ಭಟ್ ಅವರ ಚಿತ್ರವನ್ನು ಹಾಕುವಾಗ ಪ್ರಶ್ನಿಸಿದ ನೀವು ಮೋದಿಯವರ ಚಿತ್ರವನ್ನು ತೆಗೆದು ಶಾಸಕರ ಚಿತ್ರವನ್ನು ಹಾಕುವಾಗ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಒಂದು ಗಂಟೆಯಯಲ್ಲಿ ಸಾವಿರ ಕಾರ್ಯಕರ್ತರ ಸ್ಟೇಟ್ಸ್ ಮತ್ತು ಡಿ.ಪಿ.ಯಲ್ಲಿ ಭಟ್ ಅವರ ಪೋಟೋ ಹಾಕುವಂತೆ ಸಂದೇಶ ಕಳುಹಿಸಿದ್ದಾರೆ. ಅದು ಸಾವಿರಾರು ಮೊಬೈಲ್ ಗಳಿಗೆ ಸಂದೇಶ ತಲುಪಿ ಪ್ರತಿಯೊಬ್ಬ ಕಾರ್ಯಕರ್ತನ ಮೊಬೈಲ್ ನಲ್ಲೂ ಭಟ್ ಅವರ ಪೋಟೋ ಕಂಡು ಬಂತು.

ಹಾಗಾಗಿ ಬಿಜೆಪಿ ಮನೆಯೊಳಗೆ ಬೂದಿಮುಚ್ಚಿದ ಕೆಂಡ ಇದೀಗ ಸುಡಲು ಪ್ರಾರಂಭವಾಗಿದೆ ಪುತ್ತೂರಿನಲ್ಲಿ ಕಂಡು ಬಂದಿದ್ದ ದ್ವೇಷದ ಹೊಗೆ ಬಂಟ್ವಾಳ ಕ್ಕೂ ವ್ಯಾಪಿಸಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

More from the blog

ಜನಪರವಾದ ಕೆಲಸ ಮಾಡದ ಬಿಜೆಪಿಗೆ ಸೋಲು ಖಚಿತ-ಚಾಮರಸ ಮಾಲೀಪಾಟೀಲ್

ಬಂಟ್ವಾಳ: 2024 ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷವನ್ನು ಸೋಲಿಸುವ ತೀರ್ಮಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಮಾಡಿದ್ದು, ಈ ದೃಷ್ಟಿಯಿಂದ ರೈತರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದೇವೆ, ಈ ಬಾರಿ ಬಿಜೆಪಿ ನೆಲಕಚ್ಚುವುದು...

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ರವರು ದಿನಾಂಕ 19-04-2024 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಭೇಟಿ ನೀಡಿದರು. ಸೂಕ್ಷ್ಮ ಮತಗಟ್ಟೆಗಳಿರುವ ಪ್ರದೇಶಗಳಿಗೆ...

ಏ.21ರಂದು ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ

ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಎ.21ರಂದು ಎಲ್ಲಾ ಬೂತ್ ಮತಗಟ್ಟೆಗಳಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಹಮ್ಮಿಕೊಂಡಿದ್ದು, ಬಂಟ್ವಾಳ...

ನೇತ್ರಾವತಿ ನದಿ ತೀರದ ಕೃಷಿಕರ ಪಂಪ್ ಸೆಟ್ ಗಳ ವಿದ್ಯುತ್ ಸ್ಥಗಿತ : ರೈತರಿಂದ ಪ್ರತಿಭಟನೆ

ಬಂಟ್ವಾಳ: ದ.ಕ.ಜಿಲ್ಲಾಡಳಿತವೂ ಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯಾಗುತ್ತಿದೆ ಎಂದು ನೇತ್ರಾವತಿ ನದಿ ಪಾತ್ರದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತ ಮಾಡಿರುವ ವಿರುದ್ಧ ರೈತರು ಬಂಟ್ವಾಳ ತಾಲೂಕು ಆಡಳಿತ ಸೌಧದ...