Saturday, October 21, 2023

ವಿಟ್ಲ: 52ನೇ ದಸರಾ ಕಾರ್ಯಕ್ರಮಕ್ಕೆ ಚಾಲನೆ 

Must read

ವಿಟ್ಲ: ವಿಟ್ಲ ಶ್ರೀ ದೇವತಾ ಸಮಿತಿ ಇದರ 52ನೇ ವರ್ಷದ ‘ವಿಟ್ಲ ದಸರಾ’ ಕಾರ್ಯಕ್ರಮಕ್ಕೆ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ದೀಪ ಬೆಳಗಿಸಿ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಮದಾಸ ಶೆಟ್ಟಿ ವಹಿಸಿದ್ದರು. ಕೃಷ್ಣಪ್ರಸಾದ್ ಶೆಣೈ ಧ್ವಜಾರೋಹಣ ನೆರವೇರಿಸಿದರು.

ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಶ್ರೀ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ಗೋಕುಲ್ ದಾಸ್ ಶೆಣೈ, ಉಪಾಧ್ಯಕ್ಷರುಗಳಾದ ಸದಾಶಿವ ಆಚಾರ್ಯ, ಅಶೋಕ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಶೀನ ಕಾಶಿಮಠ ಮತ್ತು ರವಿಚಂದ್ರ ಕಾಮತ್, ವಿಟ್ಲ ಗ್ರಾಮಿಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ನಿತ್ಯಾನಂದ ನಾಯಕ್ ಮಂಗೇಶ್ ಭಟ್ ಉಪಸ್ಥಿತರಿದ್ದರು.

ತುಳಸೀದಾಸ್ ಶೆಣೈ ವಂದೇ ಮಾತರಂ ಹಾಡಿದರು. ಜತೆ ಕಾರ್ಯದರ್ಶಿ ವಿ. ರಾಘವೇಂದ್ರ ಪೈ ಪ್ರಸ್ತಾಪಿಸಿದರು. ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಮೋನಪ್ಪ ಗೌಡ ವಂದಿಸಿದರು. ಜೇಸಿ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ನಿರೂಪಿಸಿದರು.

ವಿಟ್ಲ ಹನುಮಗಿರಿ ಶ್ರೀ ರಾಮ ಮಂದಿರದ ಅರ್ಚಕ ವಿಕಾಸ್ ಭಟ್ ಶ್ರೀ ಶಾರದಾ ದೇವಿ ಪ್ರತಿಷ್ಠಾಪನೆ ನೆರವೇರಿಸಿದರು.

More articles

Latest article