Sunday, April 7, 2024

ಆಟೋ ರಿಕ್ಷಾದಲ್ಲಿ ಕದ್ದ ಸೊತ್ತುಗಳ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳು ಅರೆಸ್ಟ್

ವಿಟ್ಲ : ಆಟೋ ರಿಕ್ಷಾವೊಂದರಲ್ಲಿ ಕದ್ದ ಮಾಲನ್ನು ಮಾರಾಟಮಾಡಲು ಯತ್ನಿಸುತ್ತಿದ್ದ ಮೂವರನ್ನು ತಂಡವೊಂದು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲ – ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ‌.

ಸಾಲೆತ್ತೂರು ಗ್ರಾಮದ ಮೆದು ನಿವಾಸಿ ಸಿದ್ದಿಕ್ ಹಾಗೂ ಆತನೊಂದಿಗಿದ್ದ ಇಬ್ಬರ ಪೊಲೀಸರ ವಶವಾದವರಾಗಿದ್ದಾರೆ. ಸಿದ್ದಿಕ್ ಸಹಿತ ಬೀಹಾರ ಮೂಲದ ಓರ್ವ ಹಾಗೂ ಜಾರ್ಕಾಂಡ್ ಮೂಲದ ಒರ್ವ ಸೇರಿಕೊಂಡು ರಾತ್ರಿವೇಳೆ ಕನ್ಯಾನ‌ ಸಮೀಪ ಜೆಸಿಬಿ ಬಿಡಿಭಾಗಗಳನ್ನು ಕಳವು ಮಾಡಿದ್ದರೆನ್ನಲಾಗಿದೆ. ಆ ಬಳಿಕ ಅದನ್ನು ಮಾರಾಟ ಮಾಡಲೆಂದು ವಿಟ್ಲದ ಗುಜಿರಿ ಅಂಗಡಿ ಬಳಿ ತಲುಪಿದಾಗ ಕಳವುಗೈದ ವಸ್ತುಗಳನ್ನು ಹುಡುಕಿಕೊಂಡು ತಂಡವೊಂದು ಅಲ್ಲಿಗೆ ಬಂದಿತ್ತು. ಈ ಬಗ್ಗೆ ಮಾಹಿತಿ ಅರಿತ ಸಿದ್ದಿಕ್ ಸಹಿತ ಮೂವರು ಆಟೋದಲ್ಲಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರೆನ್ನಲಾಗಿದೆ. ಈ ವೇಳೆ ಬೆನ್ನಟ್ಟಿದ ತಂಡ ಆಟೋರಿಕ್ಷಾ ಸಹಿತ ಅವರನ್ನು ಕಡಂಬು ಸಮೀಪ ಅಡ್ಡಕಟ್ಟಿ ಆಟೋವನ್ನು ಪುಡಿಗೈದು ಅದರಲ್ಲಿದ್ದವರಿಗೆ ಹಲ್ಲೆ ನಡೆಸಿ ವಿಟ್ಲ ಠಾಣಾ ಪೊಲೀಸ್ ವಶಕ್ಕೆ ನೀಡಿದೆ. ಬಳಿಕ ಕಳವುಹೋದ ಜೆಸಿಬಿ ಬಿಡಿಭಾಗಗಳು ಮರಳಿ ಸಿಕ್ಕಿದ ಹಿನ್ನೆಲೆಯಲ್ಲಿ ಜೆಸಿಬಿ ಮಾಲಕರು ದೂರು ನೀಡದ ಹಿನ್ನೆಲೆಯಲ್ಲಿ‌ ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

More from the blog

ಕಲ್ಲಡ್ಕ: ಖಾಸಗಿ ಬಸ್ಸಿಗೆ ಪಿಕಪ್ ಢಿಕ್ಕಿ: ಹಲವರಿಗೆ ಗಾಯ

ವಿಟ್ಲ: ವಿಟ್ಲ ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ. ವಿಟ್ಲ ಕಡೆಗೆ ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ಒಯ್ಯುತ್ತಿದ್ದ ಪಿಕಪ್ ಆಕಸ್ಮಿಕವಾಗಿ ವಿಟ್ಲದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಸಿಗೆ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ವಿಟ್ಲ : ಮಹಿಳೆ ಆತ್ಮಹತ್ಯೆ

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕುಂಟುಕುಡೇಲು ಕಾಪಿಕಾಡು ನಿವಾಸಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿ.ರಾಮಣ್ಣ ನಾಯ್ಕ ಅವರ ಪತ್ನಿ ಸುಶೀಲಾ ಅವರು ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನೀರಿಗಾಗಿ ಪ್ರತಿಭಟನೆ 

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕೊಡ, ಬಕೆಟ್ ಹಿಡಿದು...