Wednesday, October 18, 2023

ಕಣಿಯೂರು ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಳೆ

Must read

ವಿಟ್ಲ: ಕನ್ಯಾನ ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಇವರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ : ಕೋಟಿ ಚೆನ್ನಯ ನಡೆಯಿತು.

ಇದೇ ಸಂಧರ್ಭದಲ್ಲಿ ಸುಮಾರು 60 ವರುಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿರುವ ಹಿರಿಯ ಕಲಾವಿದರಾದ ಕೋಳ್ತಿಗೆ ನಾರಾಯಣ ಗೌಡರನ್ನು ಶ್ರೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ‘ತುಳು ಯಕ್ಷರಂಗೊದ ಬೀರೆ’ ಎನ್ನುವ ಬಿರುದು ನೀಡಿ ಸನ್ಮಾನಿಸಿದರು.

ವೇದಿಕೆಯಲ್ಲಿ ಕಣಿಪುರ ಯಕ್ಷಗಾನ ಸಂಸ್ಕೃತಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಎಂ. ನಾರಾಯಣ ಚಂಬಲ್ತಿಮಾರ್, ಭಾಗವತರಾದ ಸೂರ್ಯನಾರಾಯಣ ಭಟ್ ಕಣಿಯೂರು , ಟ್ರಸ್ಟ್ ನ ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು ಉಪಸ್ಥಿತರಿದ್ದರು.

More articles

Latest article