Saturday, October 21, 2023

ಶ್ರೀ ಶಾರದಾ ಸೇವಾ ಟ್ರಸ್ಟ್( ರಿ) ಹಾಗೂ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಯ 39ನೇ ವರ್ಷದ ಶ್ರೀ ಶಾರದಾ ಮಹೋತ್ಸವ

Must read

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಶ್ರೀ ಶಾರದಾ ಭಜನಾ ಮಂದಿರ ದಲ್ಲಿ ಶ್ರೀ ಶಾರದಾ ಸೇವಾ ಟ್ರಸ್ಟ್( ರಿ) ಹಾಗೂ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿ ವತಿಯಿಂದ ಆರಾಧಿಸಿಕೊಂಡು ಬರುತ್ತಿರುವ 39ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಸೂರ್ಯನಾರಾಯಣ ಭಟ್ ಕಶೇಕೋಡಿ ನೇತೃತ್ವದ ವೈದಿಕ ತಂಡ ಗಣ ಹೋಮ ನೆರವೇರಿಸಿ ನಂತರ ವೀಣಾಧಾರಿಣಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಮಾಡಲಾಯಿತು. ಹಾಗೂ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6:00 ತನಕ ಅರ್ಧ ಏಕಹ ಭಜನಾ ಕಾರ್ಯಕ್ರಮ ಆರಂಭವಾಗಿದ್ದು ವಿವಿಧ ಬಜನಾ ತಂಡಗಳಿಂದ ಭಜನಾ ಸೇವೆ ನಡೆಯುತ್ತಾ ಇದೆ.

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ದಿನಾಂಕ 22- 10 -2023 ನೇ ಆದಿತ್ಯವಾರ ಸಂಜೆ ಗಂಟೆ 4:30 ರಿಂದ ದುರ್ಗಾ ನಮಸ್ಕಾರ ಪೂಜೆ, ಸಂಜೆ 7 ಗಂಟೆ ಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿರುವುದು. ದಿನಾಂಕ 23- 10 -2023 ನೇ ಸೋಮವಾರ ಬೆಳಿಗ್ಗೆ ಗಂಟೆ 10:30ಕ್ಕೆ ರಂಗಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ನಂತರ ವಿಸರ್ಜನ ಪೂಜೆ ನಡೆದು ಶ್ರೀ ಶಾರದಾ ಮಾತೆಯ ಭವ್ಯ ಶೋಭ* ಯಾತ್ರೆ ಎರ್ಮೆ ಮಜಲು ಗಣೇಶ್ ಕೊಡಿ ತನಕ ನಡೆದು ವಿರಕಂಬ ಮಜಿ ಶಾಲಾ ಪಕ್ಕ ಇರುವ ಮಲ್ಲಿಗೆ ಕೆರೆಯಲ್ಲಿ ಜಲಸ್ಥಂಭಣ ನೆರವೇರಲಿರುವುದು.

More articles

Latest article