Friday, October 20, 2023

ವರಾಹ ಎಂಟರ್‌ಪ್ರೈಸಸ್ ಹಾರ್ಡ್ವೇರ್ ಉತ್ಪನ್ನಗಳ ನೂತನ ಮಳಿಗೆ ಶುಭಾರಂಭ

Must read

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುನಲ್ಲಿರುವ ಧ್ರುವಿ ಕಾಂಪ್ಲೆಕ್ಸ್ ನಲ್ಲಿ ವರಾಹ ಎಂಟರ್‌ಪ್ರೈಸಸ್ ಹಾರ್ಡ್ವೇರ್ ಉತ್ಪನ್ನಗಳ ನೂತನ ಮಳಿಗೆ ಶುಭಾರಂಭಗೊಂಡಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಕಲ್ಲಡ್ಕಕ್ಕೆ ಇಂತಹ ಮಳಿಗೆಯ ಅವಶ್ಯಕತೆ ಇದ್ದು, ಅದನ್ನು ವರಾಹ ಎಂಟರ್‌ ಪ್ರೈಸಸ್ ಪೂರ್ಣಗೊಳಿಸಿದೆ. ಯುವ ಉದ್ಯಮಿ ಯುವರಾಜ್ ನೆಕ್ಕಿಲಾರು ಅವರ ಮಳಿಗೆಗೆ ಗ್ರಾಹಕರ ಉತ್ತಮ ಬೆಂಬಲ ಲಭಿಸಿ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು ಶುಭಹಾರೈಸಿದರು. ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಬಿ.ಕೆ.ಅಣ್ಣು ಪೂಜಾರಿ, ಉಪಾಧ್ಯಕ್ಷೆ ರಂಜಿನಿ ಎಸ್, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಆರ್.ಕೋಟ್ಯಾನ್, ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಉದ್ಯಮಿ ಜಯಾನಂದ ಆಚಾರ್ಯ, ಬ್ಯಾಂಕ್ ಆಫ್ ಬರೋಡ ಕಲ್ಲಡ್ಕ ಶಾಖೆಯ ಮ್ಯಾನೇಜರ್ ಧೀರಜ್, ಹಿರಿಯರಾದ ರಾಘವ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಮಾಳಿಗೆಯ ಮಾಲಕರಾದ ಯುವರಾಜ್ ನೆಕ್ಕಿಲಾರು ಹಾಗೂ ಸಹನರಾಜ್ ದಂಪತಿ ಸ್ವಾಗತಿಸಿದರು. ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ಶಿಕ್ಷಕ ಜಿನ್ನಪ್ಪ ಏಳ್ತಿಮಾರ್ ವಂದಿಸಿದರು. ನೂತನ ಮಳಿಗೆಯಲ್ಲಿ ಹಾರ್ಡ್ವೇರ್, ಎಲೆಕ್ಟ್ರಿಕಲ್, ಪ್ಲಂಬಿಂಗ್, ಸ್ಯಾನಿಟರಿ ಉತ್ಪನ್ನಗಳು, ಪೈಪುಗಳು, ಫಿಟ್ಟಿಂಗ್ಸ್, ಜಿಐ ಪೈಪುಗಳು, ಕಲ್ಲರ್ ಕೋಟೆಡ್ ಶೀಟ್‌ಗಳು ಲಭ್ಯವಾಗಲಿದೆ.

More articles

Latest article