Sunday, October 22, 2023

ತಲಪಾಡಿ ಡೈಮಂಡ್ ಶಾಲಾ ವಿದ್ಯಾರ್ಥಿಗಳಿಂದ ಪೊಲೀಸ್ ಹುತಾತ್ಮ ದಿನಾಚರಣೆ

Must read

ಬಂಟ್ವಾಳ: ಬಿ.ಸಿ.ರೋಡ್‌ ಸಮೀಪದ ತಲಪಾಡಿ ಡೈಮಂಡ್ ಇಂಟರ್ ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳು ಶನಿವಾರ ಮಂಗಳೂರಿನಲ್ಲಿ ನಡೆದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿಯ ಆವರಣದಲ್ಲಿ ನಡೆದ ಕವಾಯತು, ಪೊಲೀಸ್ ತುಕಡಿಗಳ ಸಮಾವೇಶವನ್ನು ವೀಕ್ಷಿಸುವ ಜೊತೆಗೆ, ಹುತಾತ್ಮರಿಗೆ ಪುಷ್ಪ ನಮನ ಅರ್ಪಿಸಿದರು.

ತದನಂತರ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಕಮೀಷನರ್ ಹಾಗೂ ಡೆಪ್ಯುಟಿ ಪೊಲೀಸ್ ಕಮೀಷನರನ್ನು ಭೇಟಿಯಾಗಿ ಅವರೊಂದಿಗೆ ಚರ್ಚೆ, ಸಂವಾದ ನಡೆಸಿದರು.

ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಶಾಲಾ ವತಿಯಿಂದ ಅಭಿನಂದನಾ ಫಲಕವನ್ನು ಪ್ರಾಂಶುಪಾಲ ಗಿರೀಶ್ ಕಾಮತ್ ಹಾಗೂ ಉಪ ಪ್ರಾಂಶುಪಾಲ ಅನಿಲ್ ನಾಯಕ್ ವಿತರಿಸಿದರು.

ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಭಾಷಣ ಮುಂತಾದವುಗಳನ್ನು ನಡೆಸಿದರು. ಪೊಲೀಸರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಸಿಹಿತಿಂಡಿ ಹಾಗೂ ಉಡುಗೊರೆಯನ್ನು ಹಂಚಿಕೊಂಡಿದ್ದು ಶಾಲಾ ಮಕ್ಕಳ ಈ ಚಟುವಟಿಕೆಯನ್ನು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳೊಂದಿಗೆ,‌ ಶಿಕ್ಷಕಿ ರಂಝಿಯಾ, ರುಕ್ಸನಾ ಹಾಗೂ ಶೈಲಾಕ್ಷಿ ಉಪಸ್ಥಿತರಿದ್ದರು.

More articles

Latest article