Thursday, October 26, 2023

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಹಿಳೆಯ ಚಿನ್ನ ಎಗರಿಸಿದ ಕಳ್ಳರು

Must read

ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನ ಕ್ಕೆ ಬಂದ ಮಹಿಳೆಯೋರ್ವರ ಚಿನ್ನದ ಕರಿಮಣಿ ಕಳವಾದ ಘಟನೆ ಅ.22 ರಂದು ವರದಿಯಾಗಿದೆ.

ಕಡಬದ ಇಚ್ಲಂಪಾಡಿ ಬರೆಮೇಲು ದಿನೇಶ್ ಕುಮಾರ್ ಎಂಬವರ ಪತ್ನಿ ಭಾರತಿ ಎಮ್ ಡಿ ರವರು ಕರಮಣಿ ಕಳೆದುಕೊಂಡವರು.

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಮಯ ಅವರ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಕರಿಮಣಿ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.

ದೇಗುಲದ ವಠಾರದಲ್ಲಿ ಹುಟುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಲಾಗಿರುವುದಾಗಿ ತಿಳಿದು ಬಂದಿದೆ.

ಚಿನ್ನದ ಕರಿಮಣಿಯ ಅಂದಾಜು ಮೌಲ್ಯ 1.4 ಲಕ್ಷ ರೂ.ಎಂದು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅ.ಕ್ರ ನಂಬ್ರ 75-2023 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಸಿರುವುದಾಗಿ ತಿಳಿದು ಬಂದಿದೆ.

More articles

Latest article