Saturday, October 21, 2023

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಸಮರ್ಪಣೆ… ಹರಕೆಯ ಸೇವೆ ಪೂರೈಸಿದ ಬಿಹಾರದ ಡಾ.ರಾಹುಲ್ ಕುಮಾರ್ ಪಾಟ್ನಾ

Must read

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಪ್ರಭಾವಳಿ ಇಂದು ಸಮರ್ಪಣೆ ಆಗಿರುವುದಾಗಿ ತಿಳಿದು ಬಂದಿದೆ.

ಬಿಹಾರ ಮೂಲದ ಡಾ. ರಾಹುಲ್ ಕುಮಾರ್ ಪಾಟ್ನಾ ಪ್ರಭಾವಳಿ ಸಮರ್ಪಿಸಿದ್ದು ಇಂದು ಪೂಜೆ ಸಲ್ಲಿಸಿ ಸಮರ್ಪಿಸಲಾಯಿತು.

ಕುಕ್ಕೆಸುಬ್ರಹ್ಮಣ್ಯ ದೇವರ ಭಕ್ತರು ಹಾಗೂ ದೇವಸ್ಥಾನದ ಶಿಷ್ಟಾಚಾರ ವಿಭಾಗದ ನೌಕರ ಹರೀಶ್ ರವರ ಮಿತ್ರರಾದ ಪಾಟ್ನಾದ ಖ್ಯಾತ ವೈದ್ಯ ಡಾ .ರಾಹುಲ್ ರವರು ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಅಂದಾಜು ಸುಮಾರು 30 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಿಸಿದರು ಎಂದು ಅಂದಾಜಿಸಲಾಗಿದೆ,ಸದ್ರಿ ಭಕ್ತರು ಈ ಹಿಂದೆಯೂ ನಿತ್ಯ ಅನ್ನದಾನಕ್ಕಾಗಿ 20 ಲಕ್ಷ ರೂಪಾಯಿ ನೀಡಿದ್ದರು. ಸಂತಾನ ಭಾಗ್ಯ ಲಭಿಸದ ಕಾರಣ ಈ ಹಿಂದೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಮಾಡಿ ಹರಕೆ ಹೊತ್ತು ಸಂತಾನ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಹರಕೆ ಸೇವೆ ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ,

ಈ ಸಂದರ್ಭದಲ್ಲಿ ಪುತ್ರನ ಸಹಿತ ಕ್ಷೇತ್ರಕ್ಕೆ ಬಂದು ತುಲಾಭಾರ ಸೇವೆಯನ್ನೂ ನೆರವೇರಿಸಿದರು, ಅರ್ಚಕ ಸತ್ಯನಾರಾಯಣ ನೂರಿತ್ತಾಯ ಅವರು ಬ್ರಹ್ಮಾರ್ಪಣೆ ಕಾರ್ಯ ನೆರವೇರಿಸಿದರು.

More articles

Latest article