ವಿಟ್ಲ: ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಪುಣಚ ಚೆಕ್ಕುತ್ತಿ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
![](https://nammabantwala.com/wp-content/uploads/2024/03/IMG-20240322-WA0035-jpg.webp)
ಪುಣಚ ಚೆಕ್ಕುತ್ತಿ ನಿವಾಸಿ ಶ್ರೀ ಕೃಷ್ಣ (26 ವ.) ಆತ್ಮಹತ್ಯೆ ಮಾಡಿಕೊಂಡ ಯುವಕ.
![](https://nammabantwala.com/wp-content/uploads/2024/04/WhatsApp-Image-2024-04-05-at-8.46.41-AM-jpeg.webp)
ಶ್ರೀ ಕೃಷ್ಣರವರು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತರು ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.