Wednesday, October 25, 2023

ಪುಣಚ: ಶಾರದೋತ್ಸವ ಶೋಭಾಯಾತ್ರೆ: ರಾಗ ನೃತ್ಯ ವೈಭವ 

Must read

ವಿಟ್ಲ: ಪುಣಚ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಇದೇ ಸಂದರ್ಭದಲ್ಲಿ ಪುಣಚ ಪರಿಯಾಲ್ತಡ್ಕ ಜಂಕ್ಷನ್ ನಲ್ಲಿ ಕಲ್ಪವೃಕ್ಷ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ರಾಗ, ನೃತ್ಯ ವೈಭವ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದೂ ಸಂಸ್ಕೃತಿ,ವಿಚಾರಗಳ ಅವಹೇಳನ ನಿರಂತರ ನಡೆಯುತ್ತಿದೆ. ಇಂತಹ ತುಳಿತಗಳನ್ನು ಮೆಟ್ಟಿ ನಿಲ್ಲಬೇಕು. ಹಿಂದೂ ಕಾರ್ಯಕರ್ತರ ಮೇಲೆ ವೃಥಾ ಕೇಸ್ ಹಾಕುತ್ತಿರುವುದು ದುರದೃಷ್ಟಕರ. ಸಮಾಜದ ಮುಂದೆ ಇರುವ ನೂರಾರು ಸವಾಲುಗಳನ್ನು ನಿಭಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಪುಣಚ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ ಮಾತನಾಡಿ ಶಾರದೋತ್ಸವ ಪುಣಚದ ದಸರಾ ಆಗಿ ಪರಿವರ್ತನೆಯಾಗಿದೆ. ಶಾರದಾ ಪೂಜೆ ಶಾಲೆಗಳಲ್ಲಿ ನಿಷಿದ್ಧ ವಾಗಿರುವುದು ದುರದೃಷ್ಟಕರ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಾಟಿ ವೈದ್ಯೆ ಶಾರದಾ ಅಜ್ಜಿನಡ್ಕ, ಸಾಮಾಜಿಕ ಕಾರ್ಯಕರ್ತ ಮುರಳೀಧರ ವಿಟ್ಲ, ದೈಹಿಕ ಶಿಕ್ಷಕ ಪ್ರಕಾಶ್ ತೊಂಡನಡ್ಕ, ಹಳ್ಳಿ ಮದ್ದು ಪಂಡಿತ ರಘು ಬೇರಿಕೆ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ವಿಟ್ಲದ ವೈದ್ಯ ಡಾ.ವಿ.ಕೆ ಹೆಗ್ಗಡೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಅಜ್ಜಿನಡ್ಕ, ಸದಸ್ಯ ಉದಯ ಕುಮಾರ್ ದಂಬೆ, ಉದ್ಯಮಿ ಸಂತೋಷ್ ರೈ ಬೈಲುಗುತ್ತು, ರಾಮಕೃಷ್ಣ ದಲ್ಕಜೆಗುತ್ತು, ಸಾತ್ವಿಕ್ ಖಂಡೇರಿ, ವಿಶ್ವನಾಥ ಪೂಜಾರಿ ದೇವರಗುಡ್ಡೆ, ಸಮಿತಿ ಅಧ್ಯಕ್ಷ ಹರೀಶ ಪೂಜಾರಿ ಪೊಯ್ಯಮೂಲೆ ಉಪಸ್ಥಿತರಿದ್ದರು.

ಶಿಕ್ಷಕಿ ರೇಶ್ಮಾ ಸ್ವಾಗತಿಸಿ, ವಂದಿಸಿದರು.ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಬಳಿಕ ಸುಧೀರ್ ಉಳ್ಳಾಲ ನೇತೃತ್ವದಲ್ಲಿ ಸಿಟಿಗೈಸ್ ಕುಡ್ಲಕ್ವೀನ್ಸ್ ತಂಡದಿಂದ ಗಾಯನ, ನೃತ್ಯ, ಅಭಿನಯ ಪ್ರದರ್ಶನಗೊಂಡಿತು. ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯರು ಸಹಕರಿಸಿದರು.

ಶಾರದೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಪ್ರಭು ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ವೇದಕೃಷ್ಣ ಕೊಪ್ಪರತ್ತೊಟ್ಟು ವಂದಿಸಿದರು. ಚೇತನಾ ಬೈಲುಅಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಡ್ಯಾಝಲ್ ಸ್ಟುಡಿಯೋ ಮೂಲ್ಕಿ ಕಲಾವಿದರಿಂದ ಝೇಂಕಾರ ನೃತ್ಯ ವೈಭವ ಪ್ರದರ್ಶನಗೊಂಡಿತು.

More articles

Latest article