Tuesday, October 24, 2023

ಪುಣಚ: 41ನೇ ಶ್ರೀ ಶಾರದೋತ್ಸವ

Must read

ವಿಟ್ಲ: ಪುಣಚ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಿತು.

ಸೋಮವಾರ ಬೆಳಿಗ್ಗೆ ಧ್ವಜಾರೋಹಣದ ಬಳಿಕ ಶಾರದಾ ಪ್ರತಿಷ್ಠೆ ನಡೆಯಿತು.

ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ರಾಮಲಕ್ಷ್ಮಣ ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಭಾರತದ ಸನಾತನ ಸಂಸ್ಕೃತಿಗೆ ಜಗತ್ತು ಗೌರವ ನೀಡುತ್ತಿದೆ. ಭಾರತೀಯತೆ ನಮ್ಮಲ್ಲಿ ನಿರಂತರವಾಗಿ ಉಳಿದು ಬೆಳೆಯಬೇಕು. ವಿಶ್ವದ ಪ್ರಬಲ ಆರ್ಥಿಕ ಶಕ್ತಿಯೊಂದಿಗೆ ಆಧ್ಯಾತ್ಮಿಕವಾಗಿಯೂ ಗುರುತಿಸಲ್ಪಟ್ಟಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಎಬಿವಿಪಿ ವಿಭಾಗ ಪ್ರಮುಖ ಕೇಶವ ಬಂಗೇರ ಮಾತನಾಡಿ ಭಾರತ ಅನಾದಿಕಾಲದಿಂದಲೂ ಪರಕೀಯರ ಆಕ್ರಮಣಕ್ಕೆ ತುತ್ತಾಗುತ್ತಾ ಬಂದಿದೆ.

ಅದರೊಂದಿಗೆ ಹಿಂದೂ ಧರ್ಮವೂ ನಿರಂತರ ತುಳಿತಕ್ಕೊಳಗಾಗಿದೆ. ಆದರೆ ಮತ್ತೆ ಎದ್ದುನಿಂತು ತನ್ನ ಪ್ರಖರತೆಯನ್ನು ಉಳಿಸಿಕೊಂಡು ಮಿಂಚುತ್ತಿರುವುದು ಅದರ ವಿಶೇಷತೆಯಾಗಿದೆ. ಹಿಂದುತ್ವದೊಂದಿಗೆ ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತವಾಗಿದೆ ಎಂದರು.

 

ಗ್ರಾಮ ಗೌರವ: ಇದೇ ಸಂದರ್ಭದಲ್ಲಿ ಕೃಷಿ ಉದ್ಯಮ ಸಾಧಕ ನವೀನ ಕೃಷ್ಣ ಶಾಸ್ತ್ರಿ, ಸಾಮಾಜಿಕ ಕಾರ್ಯಕರ್ತೆಯರಾದ ಉಷಾ ಕೂರೇಲು, ಲೀಲಾ ಬೈಲು ಅಡ್ಕ, ಪುಷ್ಪಾವತಿ ಕೊಚ್ಚಿ ಅವರಿಗೆ ಗ್ರಾಮ ಗೌರವ ನೀಡಲಾಯಿತು.

ಶಾರದೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಪ್ರಭು ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ವೇದಕೃಷ್ಣ ಕೊಪ್ಪರತ್ತೊಟ್ಟು ವಂದಿಸಿದರು. ಚೇತನಾ ಬೈಲುಅಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಡ್ಯಾಝಲ್ ಸ್ಟುಡಿಯೋ ಮೂಲ್ಕಿ ಕಲಾವಿದರಿಂದ ಝೇಂಕಾರ ನೃತ್ಯ ವೈಭವ ಪ್ರದರ್ಶನಗೊಂಡಿತು.

More articles

Latest article