Friday, October 27, 2023

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಆರೋಪಿ ನೌಷದ್ ಪತ್ತೆಗೆ 2 ಲಕ್ಷ ಬಹುಮಾನ ಘೋಷಣೆ

Must read

ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಆರೋಪಿಯ ಸುಳಿವಿಗೆ 2 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೆಳ್ತಂಗಡಿಯ ಪಡಂಗಡಿ ನಿವಾಸಿ ನೌಷಾದ್ ಶಾಮೀಲಾಗಿದ್ದು, ಈತನ ಸುಳಿವಿಗೆ 2 ಲಕ್ಷ ರೂ. ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ.

ಇನ್ನು ನೌಷಾದ್ ನಿಷೇದಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು, ಘಟನೆ ಬಳಿಕ ನೌಷಾದ್ ತಲೆ ಮರೆಸಿಕೊಂಡಿದ್ದರಿಂದ ಈತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಇದೀಗ ಪೊಲೀಸರು ಆರೋಪಿ ಬಂಧನಕ್ಕೆ ರಿವಾರ್ಡ್‌ ವಾಂಟೆಡ್ ನೊಟೀಸ್ ಜಾರಿ ಮಾಡಿದ್ದಾರೆ.

More articles

Latest article