Saturday, April 13, 2024

ಪೊಳಲಿ: ಆಳುಪ ದೊರೆ ಎರಡನೆಯ ಬಂಕಿದೇವನ‌ ಶಾಸನ ಅಧ್ಯಯನ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟದ ದಾಮೋದರ ಸಪಲಿಗ‌ ಇವರ ಗದ್ದೆಯಲ್ಲಿರುವ ಶಾಸನವನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ‌ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ‌‌‌ ಮೂಡುಬೆಳ್ಳೆ ಮತ್ತು ತೃತೀಯ ಬಿ.ಎ ವಿದ್ಯಾರ್ಥಿಯಾದ ವಿಶಾಲ್ ರೈ.‌ ಕೆ ಅವರು ‌ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಸುಮಾರು 3 ಅಡಿ ಎತ್ತರ, 2 ಅಡಿ ಅಗಲವನ್ನು‌ ಹೊಂದಿದೆ.‌ 13 ನೆಯ ಶತಮಾನದ ಕನ್ನಡ ಲಿಪಿ ‌ಮತ್ತು ಭಾಷೆಯಲ್ಲಿರುವ ಈ ಶಾಸನವು ಒಟ್ಟು 15 ಸಾಲುಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿ 12 ಸಾಲು ಮತ್ತು ಶಾಸನದ ಎಡ ಬದಿಯಲ್ಲಿ 3 ಸಾಲುಗಳನ್ನು ನೋಡಬಹುದು.

ಸ್ವಸ್ತಿ ಶ್ರೀಮತು ಎಂದು ಆರಂಭಗೊಳ್ಳುವ ಈ ಶಾಸನವುಕ್ರೋಧಿ ಸಂವತ್ಸರದ ಸಿಂಹಮಾಸ ಮೊದಲಾಗಿ 5ನೆಯ ಆ ಎಂದಿದ್ದು ಈ ಕಾಲಮಾನವು ಆಳುಪ ದೊರೆ 2ನೆಯ ಬಂಕಿದೇವನ (ಸಾ.ಶ.ವ. 1258-1315‌) ಆಳ್ವಿಕೆಯ ಕಾಲಕ್ಕೆ ಸರಿ ಹೊಂದುತ್ತದೆ. ಈ ಕಾಲಘಟ್ಟದಲ್ಲಿ ಆಳುಪ ದೊರೆ ಎರಡನೆಯ ಬಂಕಿದೇವನು ಮಂಗಳೂರು ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದಾಗ ಬೊಮಣತಿಕಾರಿಯು ಪೊಳಲ (ಪ್ರಸ್ತುತ ಪೊಳಲಿ) ದೇವಾಲ್ಯದಲ್ಲಿ ಕಲ್ವುಟ (ಪ್ರಸ್ತುತ ಕಲ್ಕುಟ) ದ ಭೂಮಿಯಿಂದ ಪೊಳಲ ದೇವರಿಗೆ ಬಿಟ್ಟ ಗೇಣಿಯ ವಿವರವನ್ನು ಶಾಸನವು‌ ಉಲ್ಲೇಖಿಸುತ್ತದೆ. ಶಾಸನವು ಕೊನೆಯಲ್ಲಿ ಶಾಪಾಶಯ ವಾಕ್ಯದೊಂದಿಗೆ‌ ಕೊನೆಗೊಳ್ಳುತ್ತದೆ.

ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ಮುಖ್ಯ ಗುಮಾಸ್ತ ಅರುಣ್ ಕುಮಾರ್, ವಿಜಿತಾ ಅಮೀನ್ ಮತ್ತು ಸ್ಥಳೀಯರಾದ ರೋಹಿತಾಕ್ಷ, ಸೂರಜ್ ಅವರು ಸಹಕಾರ ನೀಡಿರುತ್ತಾರೆ.

More from the blog

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...