Thursday, October 19, 2023

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ: ‘ಶ್ರೀ ಒಡಿಯೂರು ಕಲಾಸಿರಿ’ ಪ್ರಶಸ್ತಿ ಪ್ರದಾನ

Must read

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಗುರುವಾರ ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಇದೇ ಸಂದರ್ಭದಲ್ಲಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳು ಅಂತರಂಗದಲ್ಲಿ ನಿಜವಾದ ಸುಖವಿದೆ. ಜೀವನ ಬಲೆಯಾಗದೇ ಕಲೆಯಾಗಬೇಕು. ಕಲಾವಿದರು ಅಳಿದ ನಂತರವೂ ಉಳಿಯುತ್ತಾರೆ. ಸೂತ್ರಧಾರನನ್ನು ಕಡೆಗಣಿಸಿದಾಗ ಬದುಕಿನಲ್ಲಿ ಯಶಸ್ಸು ಅಸಾಧ್ಯ. ಮನೆಯೇ ಮಾನವೀಯತೆಯ ಪಾಠಶಾಲೆಯಾಗಬೇಕು. ಮೊದಲ ಗುರು ತಾಯಿಯಾಗಬೇಕು. ಮಾತೃಭಾಷೆ ಬದುಕು ಕಟ್ಟಿಕೊಡುವ ಸಾಮಾರ್ಥ್ಯವನ್ನು ಹೊಂದಿದೆ ಎಂದರು.

ಸಾಧ್ವಿ ಶ್ರೀ ಮಾತಾನಂದಮಯೀರವರು ದಿವ್ಯ ಉಪಸ್ಥಿತರಿದ್ದರು. ಉದ್ಯಮಿ ವಾಮಯ್ಯ ಶೆಟ್ಟಿ ಭಾಗವಹಿಸಿದ್ದರು.

ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಯಶೋದರ ಸಾಲ್ಯಾನ್, ಶ್ರೀ ಗುರುದೇವ ಐಟಿಐ ಯ ಜಯಂತ್ ಆಜೇರು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಅನಿತಾ, ಒಡಿಯೂರು ಶ್ರೀ ಜೈ ಕಲಾ ಕೇಂದ್ರದ ಸುಬ್ರಹ್ಮಣ್ಯ ಒಡಿಯೂರು, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಲೀಲಾ ಪ್ರಶಸ್ತಿ ಪತ್ರ ವಾಚಿಸಿದರು.

‘ಶ್ರೀ ಒಡಿಯೂರು ಕಲಾಸಿರಿ’ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಯಕ್ಷಗಾನ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್, ಖ್ಯಾತ ರಂಗನಟ, ನಿರ್ದೇಶಕ ರಮೇಶ್ ಮಾಸ್ತರ್ (ರಮಾ)ಬಿ.ಸಿ.ರೋಡ್, ಮೃದಂಗ ಮತ್ತು ತಬಲಾ ವಾದಕಿ ಅನಿತಾ ಪ್ರಭು ಬಿ.ಸಿ.ರೋಡ್, ರಂಗ ನಟ ಹಾಗೂ ಉದ್ಯಾವರ ಮಾಡದ ಅಣ್ಣದೈವ ಪಾತ್ರಿ ಪುರುಷೋತ್ತಮ ಯಾನೆ ರಾಜ ಬೆಳ್ಚಪ್ಪಾಡ, ಛಾಯಾಗ್ರಾಹಕ ಟಿ. ಹರೀಶ್ ರಾವ್ ಬಂಟ್ವಾಳ ರವರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಧ್ಯಾಹ್ನ ಶ್ರೀಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ ಬಳಿಕ ಮಹಾಸಂತರ್ಪಣೆ ನಡೆಯಿತು. ಮಧ್ಯಾಹ್ನ ಸರಯೂ ಬಾಲ ಯಕ್ಷ ವೃಂದ ಕೋಡಿಕಲ್ ಇವರಿಂದ ವರ್ಕಾಡಿ ಶ್ರೀ ರವಿ ಅಲೆವೂರಯ ವಿರಚಿತ ‘ಶ್ರೀ ಮಾತೇ ಭದ್ರಕಾಳಿ’ ಯಕ್ಷಗಾನ ಬಯಲಾಟ ನಡೆಯಿತು. ಸಾಯಂಕಾಲ ಸಾಮೂಹಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ರಂಗಪೂಜೆ, ಅಷ್ಟಾವಧಾನ ಸೇವೆ, ಶ್ರೀ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಿತು.

More articles

Latest article