Saturday, April 6, 2024

ಪೊಲೀಸ್ ಆಯುಕ್ತರ ಹೆಸರಲ್ಲಿ ವಾಟ್ಸಪ್ ಕರೆ ಮಾಡಿ ತುರ್ತು ಹಣಕ್ಕೆ ಬೇಡಿಕೆ

ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ವಾಟ್ಸಾಪ್ ನಂಬರ್ ಮೂಲಕ ಮೆಸೇಜ್ ಮಾಡಿ ತುರ್ತು ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ವಾಟ್ಸಾಪ್ ಪ್ರೊಫೈಲ್ ಪೊಟೋ ಬಳಸಿರುವ ವಾಟ್ಸಾಪ್ ನಂಬರ್ ನಿಂದ ಮೆಸೇಜ್ ಮಾಡಿರುವ ಕಿಡಿಗೇಡಿ, ತನ್ನನ್ನು ಪೊಲೀಸ್ ಆಯುಕ್ತನೆಂದು ಪರಿಚಯಿಸಿಕೊಂಡು ತುರ್ತು ಹಣದ ಬೇಡಿಕೆ ಮುಂದಿಟ್ಟಿದ್ದಾನೆ. ಈ ರೀತಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಆಯುಕ್ತರ ಹಲವು ಮಂದಿ ಪರಿಚಿತರಿಗೆ ಸಂದೇಶ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.

“ನಾನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್. ನಾನು ಆಸ್ಪತ್ರೆಗೆ ದಾಖಲಾಗಿದ್ದು ತುರ್ತು ಹಣ ಬೇಕಾಗಿದೆ. ನನ್ನ ಯುಪಿಐ ವರ್ಕ್ ಮಾಡುತ್ತಿಲ್ಲ. ಅರ್ಜೆಂಟಾಗಿ ಹಣ ಟ್ರಾನ್ಸ್ ಫರ್ ಮಾಡಿ. ಒಂದು ತಾಸಿನೊಳಗೆ ವಾಪಸ್ ಮಾಡುತ್ತೇನೆ” ಎಂದು ತಿಳಿಸಿದ್ದಾನೆ. ಅಲ್ಲದೆ ಕರೆ ಕೂಡ ಮಾಡಿದ್ದಾನೆ.

ಈ ಕುರಿತು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದು ಇದೊಂದು ನಕಲಿ ಕರೆ. ಯಾರು ಕೂಡ ಸ್ಪಂದಿಸಬಾರದು ಎಂದು ತಿಳಿಸಿದ್ದಾರೆ

More from the blog

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ನಾಮಪತ್ರ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಅವರು ಪೂಜೆ...

ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನಗಳನ್ನ ಜಖಂಗೊಳಿಸಿದ ಭಕ್ತರು

ಮುಲ್ಕಿ: ದೇವರ ರಥ ಹೋಗುವ ದಾರಿಯಲ್ಲಿದ್ದ ವಾಹನಗಳನ್ನು ಭಕ್ತರು ಜಖಂ ಗೊಳಿಸಿದ ಘಟನೆ ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಇತ್ತೀಚೆಗೆ ನಡೆದಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಜಾತ್ರೆಯಲ್ಲಿ ದೇವರ ರಥ ಹೋಗುವ...

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ನಾಮಪತ್ರ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಅರ್.ಪೂಜಾರಿ ಅವರು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮುಂಭಾಗದಿಂದ ಎ.ಬಿ.ಶೆಟ್ಟಿ ಸರ್ಕಲ್ ವರೆಗೆ...

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚುನಾವಣಾ ಸಿಬ್ಬಂದಿ

ಮಂಗಳೂರು: ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ  ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ನಡೆದಿದೆ. ಕೂಡಲೇ ಅವರನ್ನು ನಗರ್ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ...