Friday, October 27, 2023

ಅ.28-29: ಬಂಟ್ಟಾಳ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಶಿಬಿರ

Must read

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಬಂಟ್ಟಾಳ ತಾಲೂಕು ಹಾಗೂ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇದರ ಜಂಟಿ ಆಶ್ರಯದಲ್ಲಿ 2 ದಿನಗಳ ಬಂಟ್ಟಾಳ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಶಿಬಿರವು 28- 10 – 2023 ಶನಿವಾರ ಹಾಗೂ 29 – 10 – 2023 ಆದಿತ್ಯವಾರ ರಂದು ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ಳಾಡು ಇಲ್ಲಿ ಜರಗಲಿರುವುದು.

ಈ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ವರಚಿತ ಕವನ ಮತ್ತು ಕಥೆ ರಚನೆ, ಹಾಸ್ಯ ಸಾಹಿತ್ಯ, ಚಿತ್ರ ಸಾಹಿತ್ಯ , ಭಾಷಣ ಕಲೆ , ರಂಗಕಲೆ , ಚುಟುಕು ರಚನೆ ಇತ್ಯಾದಿ ವಿವಿಧ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು.

1ನೇ ತರಗತಿಯಿಂದ ಪದವಿ ಪೂರ್ವ (ಪಿಯುಸಿ) ವರೆಗಿನ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಬಂಟ್ಟಾಳ ತಾಲೂಕು ಘಟಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

More articles

Latest article