Wednesday, October 25, 2023

ಅ.26 ರಂದು ಕಲ್ಲಡ್ಕ ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದ ಭೂಮಿ ಪೂಜೆ

Must read

ಶ್ರೀ ಕಲ್ಲುಟ್ಟಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಕುದ್ರೆಬೆಟ್ಟು ಕಲ್ಲಡ್ಕ ಇಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಳ್ಳಲಿರುವ ಕುದ್ರೆಬೆಟ್ಟು ಶ್ರೀ ಕಲ್ಲುಟ್ಟಿ ದೈವಸ್ಥಾನದ ಭೂಮಿ ಅ.26 ರಂದು ಬೆಳಿಗ್ಗೆ ನಡೆಯಲಿದೆ.

ಪೂಜೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕಲ್ಲಡ್ಕ ಕುದ್ರೆಬೆಟ್ಟು ಶ್ರೀ ಕಲ್ಲುಟ್ಟಿ ದೇವಸ್ಥಾನ ಶಿಥಿಲಾವಸ್ಥೆಗೊಂಡಿದ್ದು ಊರಿನ ಭಕ್ತಾಭಿಮಾನಿಗಳು ಸೇರಿ ಅಂದಾಜು ರೂ 35 ಲಕ್ಷದಲ್ಲಿ ವೆಚ್ಚದಲ್ಲಿ ನೂತನವಾಗಿ ಪುನರ್ ನಿರ್ಮಾಣ ಮಾಡಲು ನಿರ್ಣಯಿಸಿದ್ದು, ಭೂಮಿ ಪೂಜನ ಕಾರ್ಯಕ್ರಮವು ದಿನಾಂಕ 26- 10 -2023 ನೇ ಗುರುವಾರ ಬೆಳಿಗ್ಗೆ ಗಂಟೆ 11-37 ರ ಶುಭ ಮೂರ್ತದಲ್ಲಿ ನಡೆಯಲಿರುವುದು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

More articles

Latest article