Monday, April 8, 2024

ಕಾರ್ಮಿಕ ಇಲಾಖಾಧಿಕಾರಿಯ ವಿಭಿನ್ನ ಉತ್ತರ,ಕಾರ್ಮಿಕರಲ್ಲಿ ಗೊಂದಲ

ಬಂಟ್ವಾಳ: ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟ ಕಾರ್ಮಿಕನ ವಿವಾಹಕ್ಕೆ ಸರಕಾರದಿಂದ ಸಿಗುವ ಸಹಾಯಧನ ಪಡೆಯುವ ವಿಚಾರದಲ್ಲಿ ಕಾರ್ಮಿಕ ಇಲಾಖೆಯ ದ.ಕ.ಉಪವಿಭಾಗ-2 ರ ಕಾರ್ಮಿಕ ಅಧಿಕಾರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೇಳಲಾದ ಪ್ರಶ್ನೆಗೆ ನೀಡಿರುವ ವಿಭಿನ್ನ‌ ಉತ್ತರದಿಂದ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ.

ವಿಶೇಷ ವಿವಾಹ ಅಧಿನಿಯಮ 1854 ಕಲಂ13 ರನ್ವಯ ವಿವಾಹ ನೋಂದಣಾಧಿಕಾರಿಯವರು ನೀಡಿರುವ ಮದುವೆ ಪ್ರಮಾಣಪತ್ರ ಮದುವೆ ಸಹಾಯಧನ ಪಡೆಯಲು ಸಲ್ಲಿಸಬಹುದೆ? ಎಂದು ಮಾಹಿತಿ ಹಕ್ಕು‌ಕಾಯ್ದೆಯಡಿ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮದುವೆಯ ವಯಸ್ಸು ಹೆಣ್ಣಿಗೂ, ಗಂಡಿಗೂ 21ವರ್ಷ ಎಂಬರ್ಥದ ಉತ್ತರ ನೀಡಿದ್ದರು. 21 ವರ್ಷ ಆಗದೇ ಇದ್ದಲ್ಲಿ ಕಾಯ್ದೆಯಲ್ಲಿ ಮದುವೆಗೆ ಅವಕಾಶವೆ ಇಲ್ಲ ಎಂಬಂತೆ ಉತ್ತರ ನೀಡಲಾಗಿದ್ದು,‌ಈ ಉತ್ತರವು ಹಲವಾರು ಗೊಂದಲಗಳಿಗೆ ಕಾರಣವಾಗಿತ್ತು

ಇದಾದ ನಂತರ ಮತ್ತೋರ್ವ ಅರ್ಜಿದಾರರೋರ್ವರು ಇದೇ ಮಾದರಿಯ ಪ್ರಶ್ನೆಯನ್ನು ಅದೇ ಅಧಿಕಾರಿಗೆ ಮಾಹಿತಿಹಕ್ಕಿನಲ್ಲಿ ಕೇಳಿದ್ದರು.ಎರಡನೇ ಫಲಾನುಭವಿ ಸಲ್ಲಿಸಿದ ಅರ್ಜಿಗೆ ‘ಈ ಕಚೇರಿಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳು ಇರುವುದಿಲ್ಲ’ ಎಂದು ಉತ್ತರಿಸಿದ್ದಾರೆ. ಕಾರ್ಮಿಕ ಅಧಿಕಾರಿಯವರ ಈ ವಿಭಿನ್ನ ಉತ್ತರದಿಂದ ನೋಂದಾಯಿತು ಕಾರ್ಮಿಕರು ಸರಕಾರದ ಸವಲತ್ತು ಪಡೆಯುವಲ್ಲಿ ಗೊಂದಲಕ್ಕೊಳಗಾಗಿದ್ದಾರೆ.

ಸರಕಾರವೇನೋ ದುಡಿಯುವ ಕಾರ್ಮಿಕ ವರ್ಗಕ್ಕೆ ಸವಲತ್ತುಗಳನ್ನು‌ ನೀಡುತ್ತದೆ.ಆದರೆ ಅಧಿಕಾರಿಗಳು ಹಾಕುವಂತ ಕೊಕ್ಕೆಯಿಂದಾಗಿ ಸವಲತ್ತು ಫಲಾನುಭವಿಗಳಿಗೆ ತಲುಪುವಲ್ಲಿ‌ ಸಾಧ್ಯವಾಗುತ್ತಿಲ್ಲ !

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...